ಶಿರೂರು ದುರಂತ: ಕಾಣೆಯಾಗಿರುವ ಇನ್ನೂ ಮೂವರಿಗಾಗಿ ರಕ್ಷಣಾ ತಂಡಗಳಿಂದ ಎಡೆಬಿಡದೆ ಹುಡುಕಾಟ

|

Updated on: Jul 22, 2024 | 2:11 PM

ರವಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿರೂರುಗೆ ಭೇಟಿ ನೀಡಿ ದುರಂತಲ್ಲಿ ಮಡಿದವರವ ಕುಟುಂಬಗಳ ಸದಸ್ಯರನ್ನು ಮಾತಾಡಿಸಿದರು. ರಾಜ್ಯ ಸರ್ಕಾರದಿಂದ ಸಂತ್ರಸ್ತ ಕುಟುಂಬಗಳಿಗೆ ತಲಾ ರೂ. 5 ಲಕ್ಷ ಪರಿಹಾರವನ್ನು ಘೋಷಿಸಿದ ಮುಖ್ಯಮಂತ್ರಿಯವರು ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯನ್ನೂ ನೀಡಿದರು.

ಕಾರವಾರ: ಜಿಲ್ಲೆಯ ಶಿರೂರು ಬಳಿ ಗುಡ್ಡ ಕುಸಿದು ಒಂದು ವಾರ ಕಳೆದರೂ ಮೃತದೇಹಗಳ ಶೋಧಕಾರ್ಯ ಜಾರಿಯಲ್ಲಿದೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ನೀಡಿರುವ ಮಾಹಿತಿ ಪ್ರಕಾರ ಒಟ್ಟು 10 ಜನ ದುರಂತದಲ್ಲಿ ಮೃತಪಟ್ಟಿದ್ದಾರೆ ಮತ್ತು ಇನ್ನೂ ಮೂರು ದೇಹಗಳು ಸಿಗಬೇಕಿವೆ. ದೇಹಗಳ ಹುಡುಕಾಟಕ್ಕೆ ಸೇನೆಯ ನೆರವನ್ನೂ ಪಡೆಯಲಾಗಿದ್ದು ಎನ್ ಡಿ ಅರ್ ಎಫ್, ಎಸ್ ಡಿ ಆರ್ ಎಫ್ ತಂಡಗಳು ಗುಡ್ಡಕುಸಿತ ಕಂಡ ದಿನದಿಂದಲೇ ಕಾರ್ಯಾಚರಣೆಯಲ್ಲಿ ತೊಡಗಿವೆ. ನಮ್ಮ ಕಾರವಾರ ವರದಿಗಾರ ನೀಡುತ್ತಿರುವ ಮಾಹಿತಿ ಪ್ರಕಾರ ದೇಹಗಳು ಗಂಗಾವಳಿ ನದಿಗೆ ಬಿದ್ದಿರುವುದರಿಂದ ಹುಡುಕಾಟ ಬಹಳ ಸಮಸ್ಯೆಯಾಗುತ್ತಿದೆ. ಯಾಕೆಂದರೆ ನದಿಯು ಗೋಕರ್ಣದವರೆಗೆ ಸುಮಾರು 25 ಕೀಮೀ ಹರಿದು ಅಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಇದುವರೆಗೆ ಪತ್ತೆಯಾಗಿರುವ ದೇಹಗಳೆಲ್ಲ ನದಿ ನೀರಲೇ ಸಿಕ್ಕಿವೆ. ಈ ಭಾಗದಲ್ಲಿ ಮಳೆ ಮುಂದುವರಿದಿದೆ ಮತ್ತು ದುರಂತಲ್ಲಿ ತಮ್ಮವರನ್ನು ಕಳೆದುಕೊಂಡಿರುವ ಜನ ಒಂದೇ ಸಮ ರೋದಿಸುತ್ತಿದ್ದರೆ ಪತ್ತೆಯಾಗದ ದೇಹಗಳ ಸಂಬಂಧಿಕರು ಅತೀವ ಸಂಕಟದಿಂದ ಕಾರ್ಯಾಚರಣೆಯನ್ನು ಗಮನಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಣಭೀಕರ ಮಳೆ ನಡುವೆಯೇ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ SDRF-NDRF ಜೊತೆ ಸಿಎಂ ಚರ್ಚೆ, ಮಹತ್ವದ ಸೂಚನೆ