Assembly session; ಭೋಜೇಗೌಡ ಮಾತ್ರ ವಿರೋಧ ಪಕ್ಷದ ಸದಸ್ಯರ ಪೈಕಿ ನನ್ನ ಜೊತೆ ಇರೋದು: ಸಿದ್ದರಾಮಯ್ಯ
ಕಾಂಗ್ರೆಸ್ ಪಕ್ಷದ ಸಲೀಂ ಅಹ್ಮದ್ ಅವರು ಬಿಜೆಪಿಯ ಸಿಟಿ ರವಿ ಅವರನ್ನು ಸದನದಿಂದ ಹೊರಗೆ ಕಳಿಸಬೇಕೆಂದು ಹೇಳಿದ್ದನ್ನು ಕಡತದಿಂದ ತೆಗೆದು ಹಾಕಬೇಕು ಎಂದು ವಿರೋಧ ಪಕ್ಷದ ಸದಸ್ಯರು ಸಭಾಪತಿಯವರನ್ನು ಒತ್ತಾಯಿಸಿದಾಗ, ಸರಿ ನೋಡ್ತೀನಿ ಅನ್ನುತ್ತಾರೆ. ನಂತರ ಸಲೀಂ ತಾವು ಹೇಳಿದ್ದಕ್ಕೆ ಸಮಜಾಯಿಷಿ ನೀಡುತ್ತಾರೆ.
ಬೆಂಗಳೂರು: ವಿಧಾನ ಸಭೆಯ ಕೆಳಮನೆಯಂತೆ ಮೇಲ್ಮನೆಯಲ್ಲೂ ಗದ್ದಲ ಗೌಜು. ಮುಖಮಂತ್ರಿ ಸಿದ್ದರಾಮಯ್ಯ ಮಾತಾಡುವಾಗ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಗಲಾಟೆ ಆರಂಭಿಸಿದಾಗ ಸಭಾಪತಿ ಬಸವರಾಜ ಹೊರಟ್ಟಿಯವರು, ಸಿಎಂ ಮಾತಾಡುವಾಗ ಯಾರೂ ಮಾತಾಡಬೇಡಿ, ನಿಮಗೆ ಪ್ರಶ್ನೆಗಳಿದ್ದರೆ ಬರೆದಿಟ್ಟುಕೊಂಡು ಅವರ ಮಾತು ಮುಗಿದ ಮೇಲೆ ಕೇಳಿ ಎನ್ನುತ್ತಾರೆ. ಸಿದ್ದರಾಮಯ್ಯ ಮಾತಾಡಲು ಆರಂಭಿಸಿ ಜರ್ಮನ್ ಸರ್ವಾಧಿಕಾರಿ ಹಿಟ್ಲರ್ ಮಂತ್ರಿಮಂಡಲದಲ್ಲಿದ್ದ ಗೋಬೆಲ್ಸ್ ನನ್ನು ಪ್ರಸ್ತಾಪಿಸುತ್ತಾರೆ. ಸುಳ್ಳು ಹಬ್ಬುವುದೊಂದೇ ಅವನ ಕೆಲಸವಾಗಿತ್ತು ಮತ್ತು ಆ ಕೆಲಸವನ್ನು ಬಹಳ ವರ್ಷಗಳವರೆಗೆ ನಿಷ್ಠೆಯಿಂದ ಮಾಡಿದ, ಕೊನೆಗೆ ಹಿಟ್ಲರ್ ಗತಿಯೇನಾಯ್ತ ಅಂತ ಎಲ್ಲರಿಗೆ ಗೊತ್ತಿದೆ ಎಂದು ಹೇಳಿ ವಿರೋಧ ಪಕ್ಷಗಳ ಸದಸ್ಯರು ಸಹ ಸುಳ್ಳು ಮಾತಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದರು. ನಂತರ ಜೆಡಿಎಸ್ ಸದಸ್ಯ ಎಸ್ ಎಲ್ ಭೋಜೇಗೌಡರ ಮೇಲೆ ಹಾಸ್ಯ ಚಟಾಕಿ ಹಾರಿಸಿದ ಸಿದ್ದರಾಮಯ್ಯ ವಿರೋಧ ಪಕ್ಷಗಳ ಸದಸ್ಯರ ಪೈಕಿ ಭೋಜೇಗೌಡ ಮಾತ್ರ ತನ್ನೊಂದಿಗಿರೋದು, ಆದರೂ ಒಮ್ಮೊಮ್ಮೆ ಅವಿಶ್ವಾಸ ಪ್ರಕಟಿಸುತ್ತಾರೆ, ತನ್ನನ್ನು ಮಾತಿನಲ್ಲಿ ಸಿಕ್ಕಿಸಿ ದಾರಿ ತಪ್ಪಿಸಲು ಪ್ರಯತ್ನಿಸುತ್ತಾರೆ ಅದರೆ ಅದು ಅವರಿಗೆ ಅದು ಯಾವತ್ತೂ ಸಾಧ್ಯವಾಗಲ್ಲ ಅಂತ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿದ್ದರಾಮಯ್ಯ ಉತ್ತರದ ಬಳಿಕವೂ ಆರದ ವಾಲ್ಮೀಕಿ ಹಗರಣ ಕಿಚ್ಚು: ಸದನದಲ್ಲಿ ಮುಂದುವರಿದ ಬಿಜೆಪಿ ಸದಸ್ಯರ ಧರಣಿ