Assembly Session: ಪ್ರದೀಪ್ ಈಶ್ವರ್ ಹಕ್ಕುಚ್ಯುತಿ ಮಂಡನೆಗೆ ವಿಪಕ್ಷ ನಾಯಕ ಅಶೋಕ ನೀಡಿದ ಉತ್ತರ ಹುದ್ದೆಯ ಘನತೆಗೆ ತಕ್ಕುದ್ದಾಗಿತ್ತು

Assembly Session: ಪ್ರದೀಪ್ ಈಶ್ವರ್ ಹಕ್ಕುಚ್ಯುತಿ ಮಂಡನೆಗೆ ವಿಪಕ್ಷ ನಾಯಕ ಅಶೋಕ ನೀಡಿದ ಉತ್ತರ ಹುದ್ದೆಯ ಘನತೆಗೆ ತಕ್ಕುದ್ದಾಗಿತ್ತು

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 22, 2024 | 5:02 PM

Assembly Session: ಅಶೋಕ ಅವರು ಈಶ್ವರ್ ಗೆ ಉತ್ತರ ನೀಡುತ್ತಿದ್ದ ಸಮಯದಲ್ಲಿ, ಅವರ ಪಕ್ಕದಲ್ಲಿದ್ದ ಸದಸ್ಯರೊಬ್ಬರು ಈಶ್ವರ್ ವಿಷಯಯಲ್ಲಿ ಏನೋ ಕಾಮಂಟ್ ಮಾಡಿದಾಗ ಬೇಡ ಸುಮ್ನಿರಿ ಅವನು ನಮ್ಮ ಹುಡುಗನೇ ಅನ್ನುತ್ತಾರೆ. ಯಾವ ಅರ್ಥದಲ್ಲಿ ಅಶೋಕ ಈ ಮಾತು ಹೇಳಿದರೋ ಗೊತ್ತಾಗಲಿಲ್ಲ. ಯಾಕೆಂದರೆ ಈಶ್ವರ್ ಬಿಜೆಪಿ ನಾಯಕರನ್ನು ಯಾವತ್ತೂ ಮೆಚ್ಚಿ ಮಾತಾಡಲಾರರು.

ಬೆಂಗಳೂರು: ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಶುಕ್ರವಾರದಂದು ಸದನದಲ್ಲಿ ತಮ್ಮ ವಿರುದ್ಧ ವಿರೋಧ ಪಕ್ಷದ ನಾಯಕ ಆರ್ ಅಶೋಕ ಬಳಸಿದ ಪದಗಳ ಬಗ್ಗೆ ತೀವ್ರ ಆಕ್ಷೇಪಣೆ ಸಲ್ಲಿಸಿದರು. ಅವರು ವಿರೋಧಪಕ್ಷದ ನಾಯಕನ ಗೌರವಾನ್ವಿತ ಸ್ಥಾನದಲ್ಲಿರುವವರು. ಮೊದಲಬಾರಿಗೆ ವಿಧಾನ ಸಭೆಗೆ ಆಯ್ಕೆಯಾಗಿರುವ ಒಬ್ಬ ಯುವ ಶಾಸಕನ ವಿರುದ್ಧ ಅವರು ಅವಾಚ್ಯ ಪದ ಬಳಕೆ ಮಾಡಬಾರದು. ಯುವ ಶಾಸಕರು ಅನೇಕ ಕನಸುಗಳನ್ನು ಹೊತ್ತು ಅಸೆಂಬ್ಲಿಗೆ ಬಂದಿರುತ್ತಾರೆ ಎಂದ ಈಶ್ವರ್, ಬಾಲ್ಯದಲ್ಲಿ ತಾನು ಅನುಭವಿಸಿದ ಕಷ್ಟಗಳು, ಅಪ್ಪ=ಅಮ್ಮನ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ತಾನು ತಬ್ಬಲಿಯಾಗಿದ್ದು ಮೊದಲಾದ ವೈಯಕ್ತಿಕ ವಿಷಯಗಳನ್ನು ಹೇಳಲಾರಂಭಿಸುತ್ತಾರೆ. ಆ ಸಂದರ್ಭದಲ್ಲ್ಲಿ ಮಧ್ಯಪ್ರವೇಶಿಸುವ ಸ್ಪೀಕರ್ ಯುಟಿ ಖಾದರ್ ಅವರು, ಸದನದಲ್ಲಿ ವೈಯಕ್ತಿಕ ವಿಚಾರಗಳನ್ನು ಮಾತಾಡಬಾರದು, ಸದನಕ್ಕೆ ಸೀಮಿತವಾಗಿರುವುದನ್ನು ಮಾತ್ರ ಹೇಳಿ ಅನ್ನುತ್ತಾರೆ. ಈಶ್ವರ್ ಅವರ ಹಕ್ಕುಚ್ಯುತಿ ಮಂಡನೆ ಮುಗಿದ ಬಳಿಕ ಉತ್ತರಿಸಿ ಅಶೋಕ ತಾನು ಶುಕ್ರವಾರದ ವಿಧಾನಸಭಾ ಕಲಾಪದ ದಾಖಲೆಗಳನ್ನು ತರಿಸಿಕೊಂಡು ನೋಡಿದಾಗ ಕೆಟ್ಟ ಪದಗಳನ್ನು ಬಳಸಿದ ಉಲ್ಲೇಖವಿಲ್ಲ, ಆದರೂ ಒಂದು ಪಕ್ಷ ಬಳಸಿದ್ದೇಯಾದಲ್ಲಿ ತಪ್ಪು ತಪ್ಪೇ ಅಂತ ಹೇಳಿ ದೊಡ್ಡತನ ಪ್ರದರ್ಶಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿ ಶಾಸಕರ ವಿರುದ್ಧ ವನ್ ಮ್ಯಾನ್ ಆರ್ಮಿಯಂತೆ ಕೂಗಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್

Published on: Jul 22, 2024 05:01 PM