ನೂತನ ಕಾಂಗ್ರೆಸ್ MLC ಬಾದರ್ಲಿ ಸ್ವಾಗತಕ್ಕೆ ಹಾಕಿದ್ದ ಬೃಹತ್​ ಫ್ಲೆಕ್ಸ್ ಬಿದ್ದು ಮೂವರಿಗೆ ಗಾಯ

ನೂತನ ಕಾಂಗ್ರೆಸ್ ವಿಧಾನಪರಿಷತ್​ ಸದಸ್ಯರಾಗಿ ಆಯ್ಕೆಯಾಗಿರುವ ಬಸನಗೌಡ ಬಾದರ್ಲಿ ಅವರ ಸ್ವಾಗತಕ್ಕೆ ಹಾಕಲಾಗಿದ್ದ ಬೃಹತ್​ ಫ್ಲೆಕ್ಸ್​ ಕಳಚಿ ನೆಲಕ್ಕೆ ಬಿದ್ದಿದೆ. ಸಿಂಧನೂರು ನಗರದ ಕೋರ್ಟ್​​​ ಮುಂಭಾಗದಲ್ಲಿ ಹಾಕಲಾಗಿದ್ದ ಬೃಹತ್ ಫ್ಲೆಕ್ಸ್ ದಿಢೀರ್ ಬಿದ್ದಿದ್ದ, ಪರಿಣಾಯಮ ಮೂವರಿಗೆ ಗಂಭೀರ ಗಾಯಗಳಾಗಿವೆ.

ನೂತನ ಕಾಂಗ್ರೆಸ್  MLC  ಬಾದರ್ಲಿ ಸ್ವಾಗತಕ್ಕೆ ಹಾಕಿದ್ದ ಬೃಹತ್​ ಫ್ಲೆಕ್ಸ್ ಬಿದ್ದು ಮೂವರಿಗೆ ಗಾಯ
| Updated By: ರಮೇಶ್ ಬಿ. ಜವಳಗೇರಾ

Updated on:Jul 22, 2024 | 6:23 PM

ರಾಯಚೂರು, (ಜುಲೈ 22): ಕರ್ನಾಟಕ ಯೂತ್​ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿದ್ದ ಬಸನಗೌಡ ಬಾದರ್ಲಿ ಅವರು ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪರಿಷತ್ ಸದಸ್ಯರಾಗಿ ಮೊದಲ ಬಾರಿಗೆ ಸಿಂಧನೂರು ಕ್ಷೇತ್ರಕ್ಕೆ ಆಗಮಿಸಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ನಿನ್ನೆ(ಜುಲೈ 21) ಭರ್ಜರಿಯಾಗಿ ಬರಮಾಡಿಕೊಂಡಿದ್ದಾರೆ. ನಗರದ ತುಂಬೆಲ್ಲಾ ಬ್ಯಾನರ್ ಫ್ಲೆಕ್ಸ್​ ಹಾಕಿ ಸ್ವಾಗತ ಕೋರಿದ್ದಾರೆ. ಅಲ್ಲದೇ ಡಿಜೆ ಮೆರವಣಿಗೆ ಮೂಲಕ ಬಸನಗೌದ ಬಾದರ್ಲಿ ಅವರನ್ನು ಬರಮಾಡಿಕೊಂಡಿದ್ದಾರೆ. ಆದ್ರೆ, ಬಸನಗೌಡ ಬಾದರ್ಲಿ ಅವರ ಸ್ವಾಗತಕ್ಕೆ ಕೋರ್ಟ್​ ಸರ್ಕಲ್​ ಬಳಿ ಹಾಕಲಾಗಿದ್ದ ಬೃಹತ್ ಫ್ಲೆಕ್ಸ್​ ಇಂದು (ಜುಲೈ 22) ಬೆಳಗ್ಗೆ ಏಕಾಏಕಿ ಕುಸಿದು ಬಿದ್ದಿದೆ. ಪರಿಣಾಮ​ ಮೂವರಿಗೆ ಗಂಭೀರವಾಗಿ ಗಾಯಗಳಾಗಿವೆ. ವೀರಾಪುರ ಯಮನಪ್ಪ, ಅಂಬಮ್ಮ, ಬೂದಿಹಾಳದ ಚಿಟ್ಟಿಬಾಬು ಎನ್ನುವರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:39 pm, Mon, 22 July 24

Follow us
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ
ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ
ಬೈಕ್‌ನಲ್ಲಿದ್ದಾಗ ರಸ್ತೆ ಗುಂಡಿಗೆ ಬಿದ್ದು ಪರದಾಡಿದ ಡೆಲಿವರಿ ಬಾಯ್
ಬೈಕ್‌ನಲ್ಲಿದ್ದಾಗ ರಸ್ತೆ ಗುಂಡಿಗೆ ಬಿದ್ದು ಪರದಾಡಿದ ಡೆಲಿವರಿ ಬಾಯ್
ಬೆಂಗಳೂರು: ಇನ್​ಸ್ಟಾಗ್ರಾಮ್ ಸ್ಟಾರ್ ‘ಯೂನೀಸ್ ಝರೂರಾ’ ಪೊಲೀಸ್ ವಶಕ್ಕೆ
ಬೆಂಗಳೂರು: ಇನ್​ಸ್ಟಾಗ್ರಾಮ್ ಸ್ಟಾರ್ ‘ಯೂನೀಸ್ ಝರೂರಾ’ ಪೊಲೀಸ್ ವಶಕ್ಕೆ
ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ರಮೇಶ್ ಅರವಿಂದ್ ಹೇಳಿದ್ದು ಹೀಗೆ
ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ರಮೇಶ್ ಅರವಿಂದ್ ಹೇಳಿದ್ದು ಹೀಗೆ
ಆರತಿ ತಟ್ಟೆಗೆ ಹಾಕಲು ಸಿದ್ದರಾಮಯ್ಯಗೆ ದುಡ್ಡು ಕೊಟ್ಟ ಡಿಕೆ ಶಿವಕುಮಾರ್!
ಆರತಿ ತಟ್ಟೆಗೆ ಹಾಕಲು ಸಿದ್ದರಾಮಯ್ಯಗೆ ದುಡ್ಡು ಕೊಟ್ಟ ಡಿಕೆ ಶಿವಕುಮಾರ್!
ಎತ್ತಿನಹೊಳೆ ಯೋಜನೆ ಮೊದಲ ಹಂತ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಎತ್ತಿನಹೊಳೆ ಯೋಜನೆ ಮೊದಲ ಹಂತ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಹಿಂದಿನ ಬಿಜೆಪಿ ಸರ್ಕಾರಕ್ಕೆ ಗುಮ್ಮಿದ ಪ್ರತಾಪ್‌ ಸಿಂಹ: ವಿಡಿಯೋ ವೈರಲ್
ಹಿಂದಿನ ಬಿಜೆಪಿ ಸರ್ಕಾರಕ್ಕೆ ಗುಮ್ಮಿದ ಪ್ರತಾಪ್‌ ಸಿಂಹ: ವಿಡಿಯೋ ವೈರಲ್