Assembly Session: ಸದನದ ಕಾರ್ಯಕಲಾಪ ಶುರುವಾಗುತ್ತಿದ್ದಂತೆ ಸಭಾತ್ಯಾಗ ಮಾಡಿದ ವಿರೋಧ ಪಕ್ಷದ ನಾಯಕರು

Assembly Session: ಸದನದ ಕಾರ್ಯಕಲಾಪ ಶುರುವಾಗುತ್ತಿದ್ದಂತೆ ಸಭಾತ್ಯಾಗ ಮಾಡಿದ ವಿರೋಧ ಪಕ್ಷದ ನಾಯಕರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 22, 2024 | 1:03 PM

Assembly Session: ಡೆಂಗ್ಯೂ, ಕಾಲರಾ ಮತ್ತು ರಾಜ್ಯದಾದ್ಯಂತ ಸುರಿಯುತ್ತಿರುವ ಮಳೆಯಿಂದ ಅಗಿರುವ ಅನಾಹುತಗಳ ಬಗ್ಗೆ ವಿರೋಧ ಪಕ್ಷ ಚರ್ಚೆ ಬಯಸುತ್ತದೆ ಎಂದು ಅಶೋಕ ಹೇಳುತ್ತಾರಾದರೂ, ತಮ್ಮ ಸದಸ್ಯರನ್ನು ಕರೆದುಕೊಂಡು ಸದನದಿಂದ ಹೊರನಡೆಯುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇವತ್ತು ಏನು ಹೇಳುತ್ತಾರೆ ಅನ್ನೋದನ್ನಾದರೂ ಅವರು ಕೇಳಬೇಕಿತ್ತು.

ಬೆಂಗಳೂರು: ವಾರಾಂತ್ಯದ ಬಳಿಕ ಇಂದು ವಿಧಾನಮಂಡಲ ಕಾರ್ಯಕಲಾಪಗಳು ಶುರುವಾದ ಕೂಡಲೇ ವಿರೋಧ ಪಕ್ಷದ ನಾಯಕರು ಶುಕ್ರವಾರದ ಪಟ್ಟನ್ನು ಮುಂದುವರಿಸಿದರು. ಸದನದಲ್ಲಿ ಇಂದು ನಡೆಯಬೇಕಿರುವ ಕಲಾಪದ ಬಗ್ಗೆ ಸ್ಪೀಕರ್ ಯುಟಿ ಖಾದರ್ ವಿವರಣೆ ನೀಡಿದ ಬಳಿಕ ಎದ್ದುನಿಂತು ಮಾತಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ ವಾಲ್ಮೀಕಿ ನಿಗಮದ ಹಗರಣವನ್ನು ಪ್ರಸ್ತಾಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಂಜಸ ಉತ್ತರ ನೀಡಿಲ್ಲ, ಅವರು ಹಗರಣದ ಬಗ್ಗೆ ಮಾತಾಡುವ ಬದಲು ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಮಾತಾಡಿದರು. ಇದೊಂದು ದೊಡ್ಡ ಹಗರಣವಾಗಿದೆ ಮತ್ತು ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಿದ್ದಾರೆ, ಅದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಹೇಳಿದ್ದು ಕಾಂಗ್ರೆಸ್ ಶಾಸಕರಾದ ಕೋನರೆಡ್ಡಿ ಮತ್ತು ನಯನಾ ಮೋಟಮ್ಮ ಅವರನ್ನು ಕೆರಳಿಸಿತು. ಅವರಿಬ್ಬರ ಮಾತುಗಳ ನಡುವೆ ಅಶೋಕ ನೇತೃತ್ವದ್ಲಲಿ ವಿರೋಧ ಪಕ್ಷದ ನಾಯಕರು ಸಭಾತ್ಯಾಗ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಮುಡಾ ಹಗರಣ: ಗೋಲ್ಮಾಲ್ ಸಿಎಂ 4000 ಕೋಟಿ ಗುಳುಂ, ಆರ್ ಅಶೋಕ ವಾಗ್ದಾಳಿ