ಮೊದಲ ಚಿತ್ರ ರಿಲೀಸ್​ ಆದ ಖುಷಿಯಲ್ಲಿ ಫಸ್ಟ್​ ರಿಯಾಕ್ಷನ್​ ನೀಡಿದ ಅಣ್ಣಾವ್ರ ಮೊಮ್ಮೊಗ ಧೀರೇನ್​

| Updated By: ಮದನ್​ ಕುಮಾರ್​

Updated on: Aug 26, 2022 | 2:34 PM

Shiva 143 | Dheeren Ramkumar: ಧೀರೇನ್​ ರಾಮ್​ ಕುಮಾರ್​ ನಟನೆಯ ‘ಶಿವ 143’ ಸಿನಿಮಾ ರಿಲೀಸ್​ ಆಗಿದೆ. ಅಭಿಮಾನಿಗಳ ಪ್ರೀತಿ, ಕುಟುಂಬದವರ ಪ್ರೋತ್ಸಾಹದ ಬಗ್ಗೆ ಧೀರೇನ್​ ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಡಾ. ರಾಜ್​ಕುಮಾರ್ (Dr Rajkumar) ಅವರ ಕುಟುಂಬದಿಂದ ಹಲವರು ಕೊಡುಗೆ ನೀಡಿದ್ದಾರೆ. ಅವರ ಸಾಲಿಗೆ ಅಣ್ಣಾವ್ರ ಮೊಮ್ಮೊಗ ಧೀರೇನ್​ ರಾಮ್​ ಕುಮಾರ್​ ಕೂಡ ಸೇರ್ಪಡೆ ಆಗಿದ್ದಾರೆ. ಅವರು ನಟಿಸಿರುವ ಚೊಚ್ಚಲ ಸಿನಿಮಾ ‘ಶಿವ 143’ (Shiva 143) ಅದ್ದೂರಿಯಾಗಿ ಬಿಡುಗಡೆ ಆಗಿದೆ. ತಮ್ಮ ಮೊದಲ ಸಿನಿಮಾ ರಿಲೀಸ್​ ಆಗಿರುವ ಖುಷಿಯಲ್ಲಿ ಅವರು ಮೊದಲ ರಿಯಾಕ್ಷನ್​ ನೀಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ತಾವು ಚಿರಋಣಿ ಎಂದು ಹೇಳಿದ್ದಾರೆ. ಧೀರೇನ್​ (Dheeren Ramkumar) ಅವರು ಪುನೀತ್​ ರಾಜ್​ಕುಮಾರ್​ ಫೋಟೋ ಇರುವ ಶರ್ಟ್​ ಧರಿಸಿ ಬಂದಿದ್ದು ವಿಶೇಷವಾಗಿತ್ತು. ಆ ವಿಡಿಯೋ ಇಲ್ಲಿದೆ..