ಮಕ್ಕಳ ಮುಂದೆ ಪತ್ನಿ ಗೀತಾರ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ ಶಿವಣ್ಣ
Shiva Rajkumar-Geetha: ಸ್ಯಾಂಡಲ್ವುಡ್ನ ಆದರ್ಶ ದಂಪತಿಗಳಾದ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರುಗಳು ತಮಿಳುನಾಡಿನ ದೇವಾಲಯದಲ್ಲಿ ಷಷ್ಠಿಪೂರ್ತಿ ಆಚರಿಸಿಕೊಂಡಿದ್ದಾರೆ. ಶಿವಣ್ಣ, ಗೀತಾ ಅವರಿಗೆ ಮಾಂಗಲ್ಯ ಧಾರಣೆ ಮಾಡಿರುವ ವಿಡಿಯೋ ಇಲ್ಲಿದೆ.
ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಸ್ಯಾಂಡಲ್ವುಡ್ನ ಆದರ್ಶ ದಂಪತಿ. ಸಿನಿಮಾದ ಯಾವುದೇ ಕಾರ್ಯಕ್ರಮವಾಗಲಿ ಇಬ್ಬರೂ ಒಟ್ಟಿಗೆ ಆಗಮಿಸುತ್ತಾರೆ. ಶಿವಣ್ಣ, ಚಿತ್ರರಂಗದಲ್ಲಿ ಇಷ್ಟು ದೊಡ್ಡ ಯಶಸ್ಸು ಗಳಿಸುವುದರಲ್ಲಿ ಗೀತಾ ಅವರ ಕೊಡಗೆ ದೊಡ್ಡದು. ಹಾಗೆಯೇ ಗೀತಾ ಶಿವರಾಜ್ ಕುಮಾರ್ ಅವರ ರಾಜಕೀಯ ಪಯಣಕ್ಕೂ ಪತಿಯಾಗಿ ಶಿವಣ್ಣ ಬೆಂಬಲವಾಗಿ ನಿಂತಿದ್ದಾರೆ. ಇದೀಗ ಈ ದಂಪತಿ ತಮಿಳುನಾಡಿನ ಪೌರಾಣಿಕ ದೇವಾಲಯ ಅಭಿರಾಮಿ ಅಮೃತ ಕದೇಶ್ವರರ್ ದೇವಸ್ಥಾನದಲ್ಲಿ ಷಷ್ಠಿ ಪೂರ್ತಿ ಆಚರಿಸಿಕೊಂಡಿದ್ದಾರೆ. ವಿಶೇಷವೆಂದರೆ ಶಿವಣ್ಣರ ಕೆಲವು ಬಾಲ್ಯದ ಗೆಳೆಯರು ಸಹ ತಮ್ಮ ಪತ್ನಿಯೊರಿಟ್ಟಿಗೆ ಇದೇ ಸಮಯದಲ್ಲಿ ಷಷ್ಠಿಪೂರ್ತಿ ಆಚರಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಶಿವರಾಜ್ ಕುಮಾರ್-ಗೀತಾ ದಂಪತಿಗಳ ಮಕ್ಕಳಾದ ನಿವೇದಿತಾ ಹಾಗೂ ನಿರುಪಮ ಸಹ ಸ್ಥಳದಲ್ಲಿ ಹಾಜರಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos