ಅಹಂಕಾರ ಬರಬಾರದು, ನಮ್ಮ ತಲೆ ನಮ್ಮ ಭುಜದ ಮೇಲೇ ಇರಬೇಕು: ಹೀಗೇಕೆ ಹೇಳಿದರು ಶಿವಣ್ಣ
Shiva Rajkumar: ‘ಉಪಾಧ್ಯಕ್ಷ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ ಶಿವರಾಜ್ ಕುಮಾರ್, ನಟರಿಗೆ ಅಹಂಕಾರ ಬರಬಾರದು, ನಮ್ಮ ತಲೆ ನಮ್ಮ ಭುಜದ ಮೇಲೇ ಇರಬೇಕು ಎಂದಿದ್ದು ಏಕೆ?
ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’ (Upadyaksha) ಸಿನಿಮಾದ ಟ್ರೈಲರ್ ಅನ್ನು ಶಿವರಾಜ್ ಕುಮಾರ್ (Shiva Rajkumar) ಇಂದು (ಜನವರಿ 13) ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಹಲವು ವಿಷಯಗಳ ಬಗ್ಗೆ ಎಂದಿನ ಉತ್ಸಾಹದಲ್ಲಿಯೇ ಶಿವರಾಜ್ ಕುಮಾರ್ ಮಾತನಾಡಿದರು. ಚಿಕ್ಕಣ್ಣನ ಪ್ರತಿಭೆ ಬಗ್ಗೆ, ಕನ್ನಡ ಸಿನಿಮಾದ ಹಿರಿಮೆಯ ಬಗ್ಗೆ ಮಾತನಾಡಿದರು. ಇದೇ ಸಮಯದಲ್ಲಿ ನಟರಿಗೆ ಅಹಂಕಾರ ಬರಬಾರದು, ಅವರು ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಲೇ ಬೇಕು ಎಂದರು. ಅಲ್ಲಿಯೇ ಇದ್ದ ನಟ ರವಿಶಂಕರ್ ಅವರು ಕಡ್ಡಾಯವಾಗಿ ಸಿನಿಮಾದ ಪ್ರಚಾರಕ್ಕೆ ಬರಬೇಕೆಂದು ಆಗ್ರಹಿಸಿ ಈ ಮೇಲಿನ ಮಾತುಗಳನ್ನು ಶಿವಣ್ಣ ಹೇಳಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ