ಹಾಸನ ಸಮಾವೇಶವನ್ನು ಸಿಎಂ ಮತ್ತು ಡಿಸಿಎಂ ಸೇರಿಯೇ ಪ್ಲ್ಯಾನ್ ಮಾಡಿದ್ದಾರೆ: ಸತೀಶ್ ಜಾರಕಿಹೊಳಿ

|

Updated on: Nov 29, 2024 | 2:36 PM

ಎಲ್ಲ ಪಕ್ಷಗಳಲ್ಲಿ ನಾಯಕರ ನಡುವೆ ಭಿನ್ನಮತ ಇರುವಂತೆ ಕಾಂಗ್ರೆಸ್​ನಲ್ಲೂ ಇದೆ, ಇದನ್ನು ತಾನು ಹತ್ತಾರು ಸಲ ಹೇಳಿರುವುದಾಗಿ ತಿಳಿಸಿದ ಜಾರಕಿಹೊಳಿ, ಚುನಾವಣೆ ಬಂದಾಗ ಎಲ್ಲರೂ ಒಂದಾಗುತ್ತೇವೆ, ಯಾವುದೇ ಸಮಸ್ಯೆ ಇಲ್ಲ, ಉಪ ಚುನಾವಣೆಯ ನಂತರ ಪಕ್ಷದ ಬಲ ಇಮ್ಮಡಿಗೊಂಡಿದೆ ಎಂದು ಹೇಳಿದರು.

ಹಾವೇರಿ: ಶಿಗ್ಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕಾರಣೀಕರ್ತರೆನ್ನಲಾಗುತ್ತಿರುವ ಸತೀಶ್ ಜಾರಕೊಹೊಳಿ ಇಂದು ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡುವಾಗ ಕೇಳಿದ ಪ್ರಶ್ನೆಗಳಿಗೆ ಚುಟುಕು ಉತ್ತರಗಳನ್ನು ನೀಡಿದರು. ಹಾಸನದಲ್ಲಿ ಆಯೋಜಿಸಲಾಗುವ ಸಿದ್ದರಾಮಯ್ಯ ಸಮಾವೇಶಕ್ಕೆ ಡಿಕೆ ಶಿವಕುಮಾರ್ ಬಣದ ವಿರೋಧವಿದೆ, ಹೈಕಮಾಂಡ್​ಗೆ ಬರೆದಿರುವ ಪತ್ರ ವೈರಲ್ ಅಗಿದೆ ಅಂತ ಹೇಳಿದಾಗ ಜಾರಕಿಹೊಳಿ, ಯಾವ ಪತ್ರ, ಯಾರು ಬರೆದಿದ್ದು, ವಾಟ್ಟ್ಯಾಪ್ ನಲ್ಲಿ ಹರಿದಾಡುವ ಪತ್ರ ಪಕ್ಷದ ನಿರ್ಧಾರವಾಗಲ್ಲ, ಸಿಎಂ ಮತ್ತು ಡಿಸಿಎಂ ಸೇರಿಯೇ ಸಮಾವೇಶ ಪ್ಲ್ಯಾನ್ ಮಾಡಿದ್ದಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿಲ್ಲ, ಮುಂದೆ ನೋಡೋಣ: ಸತೀಶ್ ಜಾರಕಿಹೊಳಿ