ದಸರಾ ಉದ್ಘಾಟನೆಗೆ ಸಿಎಂ ಬಾನು ಮುಷ್ತಾಕ್ರನ್ನು ಯಾಕೆ ಆಯ್ಕೆ ಮಾಡಿದ್ದಾರೆನ್ನುವುದು ಶಿವಕುಮಾರ್ಗೆ ಗೊತ್ತಿಲ್ಲ: ಪ್ರತಾಪ್ ಸಿಂಹ
ಶಿವಕುಮಾರ್ ಅವರು ಧರ್ಮ ಮತ್ತು ಆಚರಣೆಗಳ ವಿಷಯದಲ್ಲಿ ಬೇರೆಯವರಿಗೆ ಸಲಹೆ ನೀಡೋದು ಆಶ್ಚರ್ಯ ಹುಟ್ಟಿಸುತ್ತದೆ, ತಮ್ಮ ಮೂಗಿನ ಕೆಳಗಿನ ಕಪಾಲಿ ಬೆಟ್ಟವನ್ನು ಕ್ರಿಶ್ಚಿಯನ್ನರಿಗೆ ನೀಡಿ ಅದನ್ನು ಯೇಸುಬೆಟ್ಟ ಎಂದು ಕರೆಯುವಂತೆ ಮಾಡಿದ ಕೀರ್ತಿ ಅವರದ್ದು, ಅದು ಶಿವನ ಬೆಟ್ಟ ಅನ್ನೋದನ್ನು ಸಹ ಮರೆತು ಅನ್ಯ ಸಮುದಾಯದ ಜನರನ್ನು ಬ್ರದರ್ ಅಂದುಕೊಂಡು ತಿರುಗುತ್ತಿರುವ ಶಿವಕುಮಾರ್ ಧರ್ಮದ ಬಗ್ಗೆ ಜ್ಞಾನ ಹಂಚುವುದು ಬೇಡ ಎಂದು ಪ್ರತಾಪ್ ಸಿಂಹ ಹೇಳಿದರು.
ಮೈಸೂರು, ಆಗಸ್ಟ್ 27: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ದಸರ ಉದ್ಘಾಟನೆಗೆ ಸರ್ಕಾರವು ಬಾನು ಮುಷ್ತಾಕ್ (Banu Mushtaq) ಅವರನ್ನು ಆಹ್ವಾನಿಸಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಬಿಜೆಪಿ ನಾಯಕರ ನಿಲುವು ಒಂದೇಯಾಗಿರುತ್ತದೆ ಎಂದರು. ಮೌನೇಶ್ವರಿ ದೇವಿ ಮತ್ತು ಅರಿಷಿಣ ಕುಂಕುಮದ ಬಗ್ಗೆ ಅಪದ್ಧ ಮತ್ತು ಅಸಹ್ಯವಾಗಿ ಮಾತಾಡಿರುವ ಬಾನು ಮುಷ್ತಾಕ್ ಅವರು ದಸರಾ ಮಹೋತ್ಸವವನ್ನು ಉದ್ಘಾಟಿಸುವುದು ಎಷ್ಟು ಸರಿ ಅನ್ನೋದನ್ನು ಕನ್ನಡಿಗರ ವಿವೇಚನೆಗೆ ಬಿಡುತ್ತೇನೆ, ಅವರೇ ನಿರ್ಧರಿಸಲಿ ಎಂದು ಅವರು ಹೇಳಿದರು. ಬಾನು ಮುಷ್ತಾಕ್ ಅವರನ್ನು ಸಿದ್ದರಾಮಯ್ಯ ಯಾಕೆ ಆಯ್ಕೆ ಮಾಡಿದ್ದಾರೆ ಅಂತ ಡಿಕೆ ಶಿವಕುಮಾರ್ ಅವರಿಗೆ ಅರ್ಥವಾಗಿಲ್ಲ, ರಾಜ್ಯದ ಮುಸಲ್ಮಾನರೆಲ್ಲ ತನ್ನೊಂದಿಗಿದ್ದಾರೆ ಅಂತ ತೋರಿಸಲು ಮತ್ತು ಮುಖ್ಯಮಂತ್ರಿ ಕುರ್ಚಿಯಿಂದ ಶಿವಕುಮಾರ್ರನ್ನು ದೂರವಿಡಲು ಸಿದ್ದರಾಮಯ್ಯ ಮುಸ್ಲಿಂ ಲೇಖಕಿಯನ್ನು ಆಯ್ಕೆ ಮಾಡಿದ್ದಾರೆ ಅನ್ನೋದನ್ನು ಅರ್ಥಮಾಡಿಕೊಳ್ಳಲು ಶಿವಕುಮಾರ್ ವಿಫಲರಾಗಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.
ಇದನ್ನೂ ಓದಿ: ಮೈಸೂರಿಗೆ 5 ರೂಪಾಯಿ ಕೆಲಸ ಮಾಡಿಲ್ಲ ಸಿಎಂ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
