ಭಾರತ ಜೋಡೋ ಯಾತ್ರೆ ಮೊದಲ ದಿನದಿಂದ ರಾಹುಲ್ ಗಾಂಧಿಯವರೊಂದಿಗಿರುವ ಕಾರ್ಯಕರ್ತರ ಜೊತೆ ಶಿವಕುಮಾರ ಮಾತುಕತೆ
ರಾಹುಲ್ ಗಾಂಧಿಯವರೊಂದಿಗೆ ಯಾತ್ರೆ ಆರಂಭಗೊಂಡ ಕನ್ಯಾಕುಮಾರಿಯಿಂದ ಜೊತೆಗಿರುವ ಕೆಲ ಕಾರ್ಯಕರ್ತರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರು ಮಂಡ್ಯದಲ್ಲಿ ಮಂಗಳವಾರ ಬೆಳಗ್ಗೆ ಮಾತುಕತೆ ನಡೆಸಿದರು.
ಮಂಡ್ಯ: ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರಾ (Bharat Jodo Yatra) ಕರ್ನಾಟಕದಲ್ಲಿ 5 ನೇ ದಿನಕ್ಕೆ ಕಾಲಿಟ್ಟಿದೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾದಯಾತ್ರೆ ಇಂದು ಮುಂದುವರಿಯಲಿದೆ. ರಾಹುಲ್ ಗಾಂಧಿಯವರೊಂದಿಗೆ ಯಾತ್ರೆ ಆರಂಭಗೊಂಡ ಕನ್ಯಾಕುಮಾರಿಯಿಂದ ಜೊತೆಗಿರುವ ಕೆಲ ಕಾರ್ಯಕರ್ತರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ಮಂಡ್ಯದಲ್ಲಿ ಮಂಗಳವಾರ ಬೆಳಗ್ಗೆ ಮಾತುಕತೆ ನಡೆಸಿದರು.
Latest Videos