ಮುಂದಿನ 6-8 ತಿಂಗಳು ಅವಧಿಯಲ್ಲಿ ಬೆಂಗಳೂರು ಚಿತ್ರಣ ಬದಲಾಯಿಸುವ ಭರವಸೆ ಶಿವಕುಮಾರ್ ನೀಡಿದ್ದಾರೆ: ಮೋಹನದಾಸ್ ಪೈ

Updated on: Mar 01, 2025 | 3:32 PM

ತಮ್ಮ ಎಲ್ಲ ಅಭಿಪ್ರಾಯ ಮತ್ತು ಸಲಹೆಗಳಿಗೆ ಶಿವಕುಮಾರ್ ಅವರು ಉತ್ತಮವಾಗಿ ಸ್ಪಂದಿಸಿದ್ದಾರೆ, ಮುಂದಿನ 6-8ತಿಂಗಳು ಅವಧಿಯಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ಸರಿಪಡಿಸಿ ನಗರವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಮುನ್ನಡೆಸುವ ಭರವಸೆ ನೀಡಿದ್ದಾರೆ, ಅವರ ಮಾತುಗಳ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ, ಅವರ ಭೇಟಿ ಸಂತೋಷ ನೀಡಿದೆ ಎಂದು ಮೋಹನದಾಸ ಪೈ ಹೇಳಿದರು.

ಬೆಂಗಳೂರು, ಮಾರ್ಚ್1: ಬೆಂಗಳೂರು ಅಭಿವೃದ್ಧಿ ಮತ್ತು ನಗರದ ಮೂಲಭೂತ ಸೌಕರ್ಯಗಳ ಬಗ್ಗೆ ಮೊನ್ನೆಯಷ್ಟೇ ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದ ಉದ್ಯಮಿ ಟಿವಿ ಮೋಹನದಾಸ್ ಪೈ (TV Mohandas Pai) ಇಂದು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್​ರನ್ನು ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲು ಅವರನ್ನು ಭೇಟಿಯಾಗಿದ್ದೆವು, ತಮ್ಮ ಭೇಟಿಯ ಉದ್ದೇಶವಿಷ್ಟೇ; ನಗರದ ಸರ್ವಾಂಗೀಣ ಅಭಿವೃದ್ಧಿಯಾಗಬೇಕು, ಅವರು ಬೆಂಗಳೂರಿನ ಹೀರೋ ಆಗಬೇಕು, ಬೆಂಗಳೂರು ಭಾರತ ದೇಶದಲ್ಲೇ ಅತ್ಯಂತ ಸುಂದರವಾದ ದೇಶ, ಇದು ಸ್ಟಾರ್ಟರ್ಪ್ ಗಳ ಬೀಡು, 15,000 ಡಾಲರ್ಸ್ ಪರ್ ಕ್ಯಾಪಿಟಾ ಆದಾಯ ಹೊಂದಿರುವ ಬೆಂಗಳೂರು ದೇಶದ ಶ್ರೀಮಂತ ನಗರಗಳಲ್ಲಿ ಒಂದು ಅಂತ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಡಾ ಮೇಖಲಾ ವಿಶೇಷ ಸೇವೆಗೆ ಹೆಮ್ಮೆಯ ಕನ್ನಡತಿ ಪ್ರಶಸ್ತಿ ನೀಡಿದ ಡಿಕೆ ಶಿವಕುಮಾರ್​