ಬೆಂಗಳೂರು ಬಿಟ್ಟು ಆಂಧ್ರಕ್ಕೆ ಬನ್ನಿ ಎಂದ ಸಚಿವರ ಕರೆಗೆ ಸಿಲಿಕಾನ್ ಸಿಟಿ ಉದ್ಯಮಿಗಳ ರಿಯಾಕ್ಷನ್ ಹೀಗಿತ್ತು..!

Bengaluru businessmen vs Andhra: ಬೆಂಗಳೂರಿನ ಮೂಲಸೌಕರ್ಯ ವ್ಯವಸ್ಥೆ ಬಗ್ಗೆ ಉದ್ಯಮ ವಲಯದಲ್ಲಿ ಆಶ್ರೋಶ ಮಡುಗಟ್ಟಿದೆ ಎಂದು ಉದ್ಯಮಿ ಮೋಹನದಾಸ್ ಪೈ ಹೇಳಿದ್ದಾರೆ. ಅತ್ತ, ಆಂಧ್ರದ ಸಚಿವ ನಾರ ಲೋಕೇಶ್ ಅವರು ಬೆಂಗಳೂರಿನಿಂದ ತಮ್ಮ ರಾಜ್ಯಕ್ಕೆ ಬರುವಂತೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪೈ, ಮೊದಲು ತಳಮಟ್ಟದಲ್ಲಿ ಇನ್ನಷ್ಟು ಕೆಲಸ ಮಾಡಿ, ವಿಶ್ವಾಸ ಮೂಡಿಸಿ ಎಂದಿದ್ದಾರೆ.

ಬೆಂಗಳೂರು ಬಿಟ್ಟು ಆಂಧ್ರಕ್ಕೆ ಬನ್ನಿ ಎಂದ ಸಚಿವರ ಕರೆಗೆ ಸಿಲಿಕಾನ್ ಸಿಟಿ ಉದ್ಯಮಿಗಳ ರಿಯಾಕ್ಷನ್ ಹೀಗಿತ್ತು..!
ಮೋಹನದಾಸ್ ಪೈ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 24, 2024 | 1:58 PM

ಬೆಂಗಳೂರು, ಅಕ್ಟೋಬರ್ 24: ಕರ್ನಾಟಕದ ರಾಜಧಾನಿ ನಗರದಲ್ಲಿ ಭಾರೀ ಮಳೆಯಾಗಿದೆ. ಆದರೆ, ಕಳಪೆ ಸೌಕರ್ಯವ್ಯವಸ್ಥೆ ಕಾರಣಕ್ಕೆ, ಮಳೆ ಬಂದಾಗ ಇಡೀ ಉದ್ಯಾನನಗರಿಯೇ ದೊಡ್ಡ ಸರೋವರದಂತಾಗುತ್ತದೆ. ಸಿಮೆಂಟ್ ಅಥವಾ ಡಾಂಬರು ಕಿತ್ತು ಹೋದ ರಸ್ತೆಗಳು, ವಿಪರೀತ ವಾಹನ ದಟ್ಟನೆ ಇವೆಲ್ಲವೂ ಹೆಚ್ಚಿನ ಬೆಂಗಳೂರಿಗರನ್ನು ಹೈರಾಣಗೊಳಿಸಿದೆ. ಇದರಿಂದ ಬೇಸತ್ತಿರುವ ಬೆಂಗಳೂರಿನ ಉದ್ಯಮಿಗಳಿಗೆ ಆಂಧ್ರಪ್ರದೇಶ ಕೈಬೀಸಿ ಆಹ್ವಾನಿಸುತ್ತಿದೆ. ಟಿಡಿಪಿ ಪ್ರಧಾನ ಕಾರ್ಯದರ್ಶಿ ಹಾಗೂ ಆಂಧ್ರ ಸಚಿವ ನಾರ ಲೋಕೇಶ್ ಅವರು ಬೆಂಗಳೂರಿನ ಎಂಎನ್​ಸಿಗಳನ್ನು ಆಂಧ್ರಕ್ಕೆ ಶಿಫ್ಟ್ ಆಗಬೇಕೆಂದು ಕರೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕದ ಉದ್ಯಮಿ ಮೋಹನದಾಸ್ ಪೈ, ಈ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದಾರೆ.

ಆಂದ್ರದ ಹಿಂದಿನ ಸರ್ಕಾರ (ಜಗನ್ಮೋಹನ್ ರೆಡ್ಡಿ) ಎಲ್ಲಾ ಹಾಳು ಮಾಡಿತು. ಮತ್ತೆ ವಿಶ್ವಾಸ ಮೂಡಬೇಕಾದರೆ ಬಾಬುಗಾರು (ಚಂದ್ರಬಾಬು ನಾಯ್ಡು) ಸಾಕಷ್ಟು ಪ್ರಯತ್ನ ಮಾಡಬೇಕು. ಹೆಚ್ಚು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: ದೇಶದ ಹಿತಾಸಕ್ತಿಗೆ ಮೊದಲ ಆದ್ಯತೆ; ಕಣ್ಮುಚ್ಚಿ ಎಫ್​ಡಿಐ ಸ್ವೀಕರಿಸಲು ಆಗಲ್ಲ: ನಿರ್ಮಲಾ ಸೀತಾರಾಮನ್

ಬೆಂಗಳೂರಿನ ಅವ್ಯವಸ್ಥೆ ಬಗ್ಗೆ ಪೈ ಬೇಸರ

ಬೆಂಗಳೂರಿನ ರಸ್ತೆ, ಚರಂಡಿ, ಹೊರವರ್ತು ರಸ್ತೆಯಲ್ಲಿನ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದಿಂದ ಸರಿಯಾದ ಕ್ರಮ ಆಗುತ್ತಿಲ್ಲ. ಇದರಿಂದ ಎಂಎನ್​ಸಿಗಳಿಗೆ ನಿರಾಸೆಯಾಗಿದ್ದು, ನಗರದ ಹೊರಗೆ ವಿಸ್ತರಿಸಲು ಗಂಭೀರವಾಗಿ ಯೋಜಿಸುತ್ತಿವೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ತಾವು ಕೊಟ್ಟ ಮಾತನ್ನು ಪಾಲಿಸುತ್ತಿಲ್ಲ. ವಿಶ್ವಾಸ ಕಡಿಮೆ ಆಗಿದೆ. ಇದು ನಿಜಕ್ಕೂ ಬಹಳ ಗಂಭೀರ ವಿಚಾರ ಎಂದು ಮೋಹನ್ ದಾಸ್ ಪೈ ಅ. 21ರಂದು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಅಸಮಾಧಾನ ತೋಡಿಕೊಂಡಿದ್ದರು.

‘ನಗರವನ್ನು ಉಳಿಸಲು ಸಿಎಂ ಮತ್ತು ಡಿಸಿಎಂ ತುರ್ತು ಕ್ರಮ ತೆಗೆದುಕೊಳ್ಳಲೇಬೇಕು. ಕಳೆದ 20 ವರ್ಷದಲ್ಲಿ ಇಷ್ಟು ಆಕ್ರೋಶ ಮತ್ತು ನೋವನ್ನು ನೋಡಿಯೇ ಇರಲಿಲ್ಲ. ನಗರದ ಆಡಳಿತ ನಿರ್ವಹಣೆ ಅಸಮರ್ಪಕವಾಗಿದೆ. ಸುಳ್ಳು ಭರವಸೆಗಳಿಂದ ಬೆಸರವಾಗಿದೆ. ತನ್ನ ನಾಗರಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಈ ರೀತಿಯ ಬೇಜವಾಬ್ದಾರಿಯುತ ಸರ್ಕಾರ ಇರುವುದು ದುರದೃಷ್ಟಕರ ಸಂಗತಿ,’ ಎಂದು ಇನ್ಫೋಸಿಸ್​ನ ಮಾಜಿ ಸಿಎಫ್​ಒ ಮೋಹನ್​ದಾಸ್ ಪೈ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಮೋದಿಯ ಆ ಮಾತು ಸರಿ ಅನಿಸಿತು… ಭಾರತದೊಂದಿಗೆ ಸೇರಿ ಚಿಪ್ ತಯಾರಿಸಲು ಸಜ್ಜಾದ ವಿಶ್ವ ದೈತ್ಯ ನಿವಿಡಿಯಾ

ಆಂಧ್ರಕ್ಕೆ ಬನ್ನಿ ಎಂದ ನಾರ ಲೋಕೇಶ್

ಮೋಹನ್​ದಾಸ್ ಪೈ ಅವರ ಪೋಸ್ಟ್​ಗೆ ಆಂಧ್ರ ಸಚಿವ ನಾರ ಲೋಕೇಶ್ ಇಂದು ಪ್ರತಿಕ್ರಿಯಿಸಿ, ಬೆಂಗಳೂರಿನ ಉದ್ಯಮಿಗಳನ್ನು ಆಂಧ್ರಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.

‘ಎಲ್ಲಾ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಆಂಧ್ರಕ್ಕೆ ಬರಬೇಕೆಂದು ಆಹ್ವಾನಿಸುತ್ತೇನೆ. ಆಂಧ್ರದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಉದ್ಯಮ ಸ್ನೇಹಿ ನೀತಿಗಳನ್ನು ಜಾರಿಗೆ ತಂದಿದ್ದಾರೆ. ಉದ್ಯಮಗಳನ್ನು ನಮ್ಮ ರಾಜ್ಯದ ಕಲ್ಯಾಣ ಮತ್ತು ಪ್ರಗತಿಗೆ ಪ್ರಮುಖ ಭಾಗಿದಾರರಾಗಿ ಪರಿಗಣಿಸುತ್ತೇವೆ. ವಿಶ್ವದರ್ಜೆ ಮೂಲಸೌಕರ್ಯ ಹಾಗೂ ಅಸಾಧಾರಣ ಬಿಸಿನೆಸ್ ಇಕೋಸ್ಟಂ ಅನ್ನು ನಾವು ಒದಗಿಸಲು ಸಿದ್ಧರಿದ್ದೇವೆ,’ ಎಂದು ನಾರ ಲೋಕೇಶ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ