AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಡ್ ಇನ್ ಇಂಡಿಯಾ ರೆಡಿಮೇಡ್ ಸ್ಟೀಲ್ ಬ್ರಿಡ್ಜ್; ಬುಲೆಟ್ ಟ್ರೈನ್ ಮಾರ್ಗದಲ್ಲಿ ಐದನೇ ಉಕ್ಕು ಸೇತುವೆ ಅಳವಡಿಕೆ

Steel bridges in Mumbai-Ahmedabad high speek rail project: ಅಹ್ಮದಾಬಾದ್ ಮತ್ತು ಮುಂಬೈನ ನಡುವಿನ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಕಾಮಗಾರಿ ಭರ್ಜರಿಯಾಗಿ ಸಾಗಿದೆ. ಈ ಮಾರ್ಗದಲ್ಲಿ 28 ಉಕ್ಕಿನ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಇವೆಲ್ಲವೂ ರೆಡಿಮೇಡ್ ಬ್ರಿಡ್ಜ್ ಆಗಿವೆ. ಬೇರೆ ಕಡೆ ಇವನ್ನು ತಯಾರಿಸಿ ಬಳಿಕ ನಿಗದಿತ ಸ್ಥಳದಲ್ಲಿ ಅಳವಡಿಕೆ ಮಾಡಲಾಗುತ್ತಿದೆ. ಈವರೆಗೆ ಇಂಥ ಐದು ಬ್ರಿಡ್ಜ್​ಗಳನ್ನು ಸ್ಥಾಪಿಸಲಾಗಿದೆ.

ಮೇಡ್ ಇನ್ ಇಂಡಿಯಾ ರೆಡಿಮೇಡ್ ಸ್ಟೀಲ್ ಬ್ರಿಡ್ಜ್; ಬುಲೆಟ್ ಟ್ರೈನ್ ಮಾರ್ಗದಲ್ಲಿ ಐದನೇ ಉಕ್ಕು ಸೇತುವೆ ಅಳವಡಿಕೆ
ಉಕ್ಕಿನ ಸೇತುವೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 24, 2024 | 12:03 PM

Share

ವಡೋದರಾ, ಅಕ್ಟೋಬರ್ 24: ಮುಂಬೈ ಅಹ್ಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯ ಭಾಗವಾಗಿ ವಡೋದರಾದಲ್ಲಿ 60 ಮೀಟರ್ ಉದ್ದದ ಉಕ್ಕಿನ ಸೇತುವೆಯನ್ನು ನಿರ್ಮಿಸಲಾಗಿದೆ. ಬಾಜ್ವಾ ಮತ್ತು ಛಾಯಾಪುರಿ ಮಾರ್ಗದಲ್ಲಿ ಈ ಸ್ಟೀಲ್ ಬ್ರಿಡ್ನ್ ಅನ್ನು ಅಳವಡಿಸಲಾಗಿದೆ. ಮುಂಬೈ ಅಹ್ಮದಾಬಾದ್ ಕಾರಿಡಾರ್​ನಲ್ಲಿ ಇಂಥ ಒಟ್ಟು 28 ಸ್ಟೀಲ್ ಸೇತುವೆಗಳನ್ನು ಯೋಜಿಸಲಾಗಿದ್ದು, ನಿನ್ನೆ ನಿರ್ಮಿಸಲಾಗಿರುವುದು ಐದನೆಯದ್ದಾಗಿದೆ.

60 ಮೀಟರ್ ಉದ್ದದ ಈ ಸೇತುವೆ 12.5 ಮೀಟರ್ ಎತ್ತರ ಹಾಗೂ 14.7 ಮೀಟರ್ ಅಗಲ ಇದ್ದು, 645 ಮೆಟ್ರಿಕ್ ಟನ್​ಗಳ ತೂಕ ಇದೆ. ಇದನ್ನು ಕಚ್ಛ್ ಜಿಲ್ಲೆಯ ಬಚಾವು ನಗರದಲ್ಲಿ ತಯಾರಿಸಿ, ಆ ಬಳಿಕ ವಡೋದರಾಗೆ ಸಾಗಿಸಿ ಅಲ್ಲಿ ಸ್ಥಾಪಿಸಲಾಗಿದೆ. ಜಪಾನೀ ತಂತ್ರಜ್ಞರ ಸಹಾಯ ಪಡೆದು ಈ ಯೋಜನೆ ಮಾಡಲಾಗಿದೆ. ಈ ರೀತಿಯ ರೆಡಿಮೇಡ್ ಸ್ಟೀಲ್ ಬ್ರಿಡ್ಜ್ ಅನ್ನು ಭಾರತದಲ್ಲೇ ತಯಾರಿಸಿರುವುದು ಇದೇ ಮೊದಲು.

ಇದನ್ನೂ ಓದಿ: ದೇಶದ ಹಿತಾಸಕ್ತಿಗೆ ಮೊದಲ ಆದ್ಯತೆ; ಕಣ್ಮುಚ್ಚಿ ಎಫ್​ಡಿಐ ಸ್ವೀಕರಿಸಲು ಆಗಲ್ಲ: ನಿರ್ಮಲಾ ಸೀತಾರಾಮನ್

ಕೆಲ ತಿಂಗಳ ಹಿಂದೆ ಇದೇ ವಡೋದರಾದಲ್ಲಿ 130 ಮೀಟರ್ ಉದ್ದದ ಸ್ಟೀಲ್ ಬ್ರಿಡ್ಜ್ ಅನ್ನು ಕೇವಲ 24 ಗಂಟೆ ಅವಧಿಯಲ್ಲಿ ಅಸೆಂಬಲ್ ಮಾಡಲಾಗಿತ್ತು. ಮಹಾರಾಷ್ಟ್ರದ ವಾರ್ಧಾದಲ್ಲಿ ಆ ಉಕ್ಕಿನ ಸೇತುವೆಯನ್ನು ತಯಾರಿಸಿ ಆ ಬಳಿಕ ವಡೋದರಾದ ನಿಗದಿತ ಸ್ಥಳಕ್ಕೆ ಸಾಗಿಸಿ ಅಲ್ಲಿ ಸ್ಥಾಪಿಸಲಾಗಿತ್ತು. ಸೂರತ್​ನಲ್ಲಿ ರಾ.ಹೆ. 53ರಲ್ಲಿ ಈ ರೀತಿಯ ಮೊದಲ ಉಕ್ಕಿನ ಸೇತುವೆ ನಿರ್ಮಿಸಲಾಗಿದೆ. ವಡೋದರಾ-ಅಹ್ಮದಾಬಾದ್ ರೈಲ್ವೆ ಲೈನ್​ನಲ್ಲಿ ಎರಡನೇ ಸ್ಟೀಲ್ ಬ್ರಿಡ್ಜ್ ನಿರ್ಮಿಸಲಾಗಿತ್ತು.

ಅಹ್ಮದಾಬಾದ್ ಮತ್ತು ಮುಂಬೈ ನಡುವಿನ ಈ ಹೈಸ್ಪೀಡ್ ರೈಲ್ ಮಾರ್ಗದಲ್ಲಿ ಬುಲೆಟ್ ಟ್ರೈನ್​ವೊಂದು ಗಂಟೆಗೆ 320 ಕಿಮೀ ವೇಗದಲ್ಲಿ ಹೋಗಬಹುದು. ಮುಂಬೈನಿಂದ ಅಹ್ಮದಾಬಾದ್ ತಲುಪಲು ಕೇವಲ 2ರಿಂದ 2.5 ಗಂಟೆ ಸಾಕಾಗಬಹುದು. 2027ಕ್ಕೆ ಇಲ್ಲಿ ಮೊದಲ ಬುಲೆಟ್ ರೈಲು ಬರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಮೋದಿಯ ಆ ಮಾತು ಸರಿ ಅನಿಸಿತು… ಭಾರತದೊಂದಿಗೆ ಸೇರಿ ಚಿಪ್ ತಯಾರಿಸಲು ಸಜ್ಜಾದ ವಿಶ್ವ ದೈತ್ಯ ನಿವಿಡಿಯಾ

ಭಾರತದಲ್ಲಿ ನಡೆಯುತ್ತಿರುವ ಈ ಪ್ರಯೋಗದ ಅನುಭವವು ಮುಂದಿನ ದಿನಗಳಲ್ಲಿ ಬುಲೆಟ್ ರೈಲು ಯೋಜನೆಗಳನ್ನು ಸರಾಗವಾಗಿ ನಡೆಸಲು ಅನುಕೂಲ ಮಾಡಿಕೊಡುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ