ಸಿದ್ದರಾಮಯ್ಯ ಸಿಎಂ ಸ್ಥಾನ ನಿಟ್ಟುಕೊಡಲ್ಲ, ಹಾಗಾಗಿ ಶಿವಕುಮಾರ್ ಸಿಎಂ ಆಗಲ್ಲ: ಬಿ ಶ್ರೀರಾಮುಲು

ಅರುಣ್​ ಕುಮಾರ್​ ಬೆಳ್ಳಿ Edited By:

Updated on: Jul 05, 2026 | 10:18 AM

ಶಿವಕುಮಾರ್ ಮುಖ್ಯಮಂತ್ರಿ ಅಗಲ್ಲ ಅಂತಲೂ ಶ್ರೀರಾಮುಲು ಹೇಳುತ್ತಾರೆ. ಅವರು ಮುಖ್ಯಮಂತ್ರಿಯಾಗಬೇಕಾದರೆ ಈಗಿರುವ ಸಿಎಂ ಸಿದ್ದರಾಮಯ್ಯ ಸ್ಥಾನ ಬಿಟ್ಟಕೊಡಬೇಕು,ಆದರೆ ಸಿದ್ದರಾಮಯ್ಯ ಯಾವತ್ತೂ ಹಾಗೆ ಮಾಡಲಾರರು, ರಂದೀಪ್ ಸುರ್ಜೆವಾಲಾ ಶಾಸಕರ ಅಭಿಪ್ರಾಯಗಳನ್ನು ಹೊತ್ತು ದೆಹಲಿಗೆ ಹೋದ ಬಳಿಕ ಹೈಕಮಾಂಡ್ ಸಿದ್ದರಾಮಯ್ಯರನ್ನು ಬದಲಾಯಿಸಬೇಕಾ ಇಲ್ಲವಾ ಅಂತ ನಿರ್ಣಯಿಸುತ್ತದೆ ಎಂದು ಶ್ರೀರಾಮುಲು ಹೇಳಿದರು.

ಬಳ್ಳಾರಿ, ಜುಲೈ 9: ಮಾಜಿ ಸಚಿವ ಬಿ ಶ್ರೀರಾಮುಲು ಮಾತ್ರವಲ್ಲ, ನಮ್ಮ ರಾಜಕಾರಣಿಗಳೇ ಹಾಗೆ, ಹಿಂದೆ ಆಡಿದ ಮಾತು ಅವರಿಗೆ ನೆನಪಿರೋದಿಲ್ಲ, ಆವೇಗದಲ್ಲಿ ಏನೋ ಮಾತಾಡಿಬಿಡುತ್ತಾರೆ, ನಂತರ ಅದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡುತ್ತಾರೆ. ಶ್ರೀರಾಮುಲು ಹಿಂದೊಮ್ಮೆ ಡಿಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಕಾಂಗ್ರೆಸ್ ನಿಂದ ಹೊರಬಂದು ಬಿಜೆಪಿ ಬೆಂಬಲದಿಂದ ಸರ್ಕಾರ ರಚಿಸುತ್ತಾರೆ ಅಂತ ಹೇಳಿದ್ದರು, ಈಗ ಬೇರೆ ಮಾತಾಡ್ತೀರಲ್ಲ ಸರ್ ಅಂತ ಮಾಧ್ಯಮದವರು ಹೇಳಿದಾಗ, ಮುಂದೇನಾಗುತ್ತೋ ಅಂತ ನೋಡೋಣ, ಆದರೆ ನಾನು ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತ, ಶಿವಕುಮಾರ್​ಗೆ ತಮ್ಮ ಪಕ್ಷ ಬೆಂಬಲ ನೀಡುತ್ತದೋ ಇಲ್ಲವೊ ಅನ್ನೋದನ್ನು ನಿರ್ಧರಿಸಲಾರೆ, ಪಕ್ಷದ ವರಿಷ್ಠರಿದ್ದಾರೆ, ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶ್ರೀರಾಮುಲು ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jul 09, 2025 06:04 PM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.