ಅಕ್ರಮ ಹಣ, ಆಸ್ತಿ ಪ್ರಕರಣದಲ್ಲಿ ಶಿವಕುಮಾರ ಇನ್ನೂ ನಿರ್ದೋಷಿಯಲ್ಲ, ಜಾಮೀನು ಮೇಲೆ ಹೊರಗಿದ್ದಾರೆ ಅಷ್ಟೇ: ಕೆ ಎಸ್ ಈಶ್ವರಪ್ಪ

ಅಕ್ರಮ ಹಣ, ಆಸ್ತಿ ಪ್ರಕರಣದಲ್ಲಿ ಶಿವಕುಮಾರ ಇನ್ನೂ ನಿರ್ದೋಷಿಯಲ್ಲ, ಜಾಮೀನು ಮೇಲೆ ಹೊರಗಿದ್ದಾರೆ ಅಷ್ಟೇ: ಕೆ ಎಸ್ ಈಶ್ವರಪ್ಪ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 08, 2022 | 2:27 PM

ಆದಾಯಕ್ಕೆ ಮೀರಿದ ಪ್ರಕರಣದಲ್ಲಿ ನಿರ್ದೋಷಿ ಅನ್ನೋದು ಇನ್ನೂ ಸಾಬೀತಾಗಿಲ್ಲ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ, ಅವರ ಮನೆ ಮೇಲೆ ದಾಳಿ ನಡೆದಾಗ ಸಾಕಷ್ಟು ಪ್ರಮಾಣದಲ್ಲಿ ಅಕ್ರಮ ಹಣ ಸಿಕ್ಕಿದ್ದನ್ನು ಜನರೆಲ್ಲ ನೋಡಿದ್ದಾರೆ ಅಂತ ಈಶ್ವರಪ್ಪ ಹೇಳಿದರು.

ಶಿವಮೊಗ್ಗ:  ಮಾಜಿ ಸಚಿವ ಕೆ ಎಸ್ ಈಶ್ವರಪ್ಪನವರು ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗೋಷ್ಟಿಯೊಂದನ್ನು ನಡೆಸಿ ತಿಹಾರ್ ಜೈಲಿಗೆ ಹೋಗಿದ್ದ ಡಿಕೆ ಶಿವಕುಮಾರ (DK Shivakumar) ಆದಾಯಕ್ಕೆ ಮೀರಿದ ಪ್ರಕರಣದಲ್ಲಿ ನಿರ್ದೋಷಿ ಅನ್ನೋದು ಇನ್ನೂ ಸಾಬೀತಾಗಿಲ್ಲ ಅವರು ಜಾಮೀನಿನ (Bail) ಮೇಲೆ ಹೊರಗಿದ್ದಾರೆ ಅಂತ ಹೇಳಿದರು. ಅವರ ಮನೆ ಮೇಲೆ ದಾಳಿ ನಡೆದಾಗ ಸಾಕಷ್ಟು ಪ್ರಮಾಣದಲ್ಲಿ ಅಕ್ರಮ ಹಣ ಸಿಕ್ಕಿದ್ದನ್ನು ಜನರೆಲ್ಲ ನೋಡಿದ್ದಾರೆ. ಆ ಹಣ ಎಲ್ಲಿಂದ ಬಂತು, ನ್ಯಾಶನಲ್ ಹೆರಾಲ್ಡ್ (National Herald) ಪತ್ರಿಕೆಗೆ ಅವರು ಮತ್ತು ಅವರ ಸಹೋದರ ಡಿಕೆ ಸುರೇಶ ನೀಡಿದ ದೇಣಿಗೆ ಮೊದಲಾದ ಸಂಗತಿಗಳನ್ನು ಶಿವಕುಮಾರ ಸ್ಪಷ್ಟಪಡಿಸಬೇಕು ಎಂದು ಈಶ್ವರಪ್ಪ ಹೇಳಿದರು.