ರಾಜಕಾರಣಿಗಳೆಲ್ಲ ಬಿವೈ ರಾಘವೇಂದ್ರರ ಹಾಗೆ ಮಾತಾಡಿದರೆ ಜಗಳ-ವಿವಾದಗಳಿಗೆ ಆಸ್ಪದವಿರಲ್ಲ!
ಈಶ್ವರಪ್ಪ ತಮ್ಮ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಫೋಟೋ ಬಳಸುತ್ತಿರುವ ಬಗ್ಗೆಯೂ ಅವರು ಬಹಳ ಸಮಾಧಾನದಿಂದ ಉತ್ತರಿಸಿದರು. ಮೋದಿ ಅವರು ದೇಶದ ಎಲ್ಲರ ಮನಸ್ಸಿನಲ್ಲಿದ್ದಾರೆ, ಆದರೆ ಬಿಜೆಪಿ ಅಧಿಕೃತ ಅಭ್ಯರ್ಥಿ ತಾನಾಗಿರುವುದರಿಂದ ಅವರ ಫೋಟೋ ಮತ್ತು ಹೆಸರು ಬಳಸುವ ಅಧಿಕಾರ ಮತ್ತು ಹಕ್ಕು ತನಗೆ ಮಾತ್ರ ಇದೆ ಎಂದು ರಾಘವೇಂದ್ರ ಹೇಳಿದರು.
ದಾವಣಗೆರೆ: ಕಾಗಿನೆಲೆ ಗುರುಪೀಠದಲ್ಲಿ ಗುರುಗಳ ಆಶೀರ್ವಾದ ಪಡೆದು ಹೊರಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ (BY Raghavendra), ಕೇವಲ ಕ್ಷೇತ್ರ ಮತ್ತು ತಮ್ಮ ಉಮೇದುವಾರಿಕೆ ಬಗ್ಗೆ ಮಾತ್ರ ಮಾತಾಡಿದರು. ಎಲ್ಲ ಪಕ್ಷಗಳ ನಾಯಕರು ಇವರ ಹಾಗೆ ಮಾತಾಡಿದರೆ ವಿವಾದಗಳಿಗೆ ಆಸ್ಪದವಿರಲ್ಲ ಅನಿಸುತ್ತೆ. ಈಶ್ವರಪ್ಪ (KS Eshwarappa) ಕುರಿತು ಪ್ರಶ್ನಿಸಿದಾಗಲೂ ರಾಘವೇಂದ್ರ ತನಗೆ ಎದುರಾಳಿಯಾಗಿ ಸ್ಪರ್ಧೆಗಿಳಿದಿರುವ ಹಿರಿಯ ನಾಯಕನ ಬಗ್ಗೆ ಕಾಮೆಂಟ್ ಮಾಡದೆ ಪಕ್ಷದ ವರಿಷ್ಠರು ಅದನ್ನೆಲ್ಲ ನೋಡಿಕೊಳ್ಳುತ್ತಾರೆ ಎಂದು ಮುಗುಳ್ನಗುತ್ತಾ ಹೇಳಿದರು. ಈಶ್ವರಪ್ಪ ತಮ್ಮ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಫೋಟೋ ಬಳಸುತ್ತಿರುವ ಬಗ್ಗೆಯೂ ಅವರು ಬಹಳ ಸಮಾಧಾನದಿಂದ ಉತ್ತರಿಸಿದರು. ಮೋದಿ ಅವರು ದೇಶದ ಎಲ್ಲರ ಮನಸ್ಸಿನಲ್ಲಿದ್ದಾರೆ, ಆದರೆ ಬಿಜೆಪಿ ಅಧಿಕೃತ ಅಭ್ಯರ್ಥಿ ತಾನಾಗಿರುವುದರಿಂದ ಅವರ ಫೋಟೋ ಮತ್ತು ಹೆಸರು ಬಳಸುವ ಅಧಿಕಾರ ಮತ್ತು ಹಕ್ಕು ತನಗೆ ಮಾತ್ರ ಇದೆ ಎಂದು ರಾಘವೇಂದ್ರ ಹೇಳಿದರು.
ತಮ್ಮ ಕ್ಷೇತ್ರದ ಕಾರ್ಯಕರ್ತರ ಬಗ್ಗೆ ಬಹಳ ಗೌರವ ಮತ್ತು ಹೆಮ್ಮೆಯಿಂದ ಮಾತಾಡುವ ಸಂಸದ, ಅವರು ಪಡುತ್ತಿರುವ ಪರಿಶ್ರಮಕ್ಕೆ ಬೆಲೆ ಕಟ್ಟಲಾಗಲ್ಲ ಎಂದರು. ಅವರ ಕೊನೆ ಮಾತಿನಲ್ಲೂ ನಮ್ರತೆಯನ್ನು ಕಾಣಬಹುದು; ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನರೇಂದ್ರ ಮೋದಿಯವರೇ ಗೆಲ್ಲೋದು ಅಂತ ಅವರು ಹೇಳುತ್ತಾರೆಮ, ತಾನು ಅನ್ನಲ್ಲ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿ ಸಂಸದ ಬಿವೈ ರಾಘವೇಂದ್ರ ಮತ್ತೆ ಗೆಲ್ಲಬೇಕು: ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ