ಪತಿಯೊಂದಿಗೆ ಭದ್ರಾವತಿಯಿಂದ ಪ್ರಚಾರ ಆರಂಭಿಸಿದ ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್

|

Updated on: Mar 20, 2024 | 2:59 PM

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಶಿವಣ್ಣ ತಮ್ಮ ಬಾಮೈದ ಮಧು ಬಂಗಾರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಗದೀಶ್ ಶೆಟ್ಟರ್ ಪರ ಪ್ರಚಾರ ನಡೆಸಿದ್ದರು. ಹಾಗೆ ನೋಡಿದರೆ ಗೀತಾ ಅವರಿಗೆ ರಾಜಕಾರಣ ಹೊಸದೇನೂ ಅಲ್ಲ.

ಶಿವಮೊಗ್ಗ: ಲೋಕಸಭಾ ಚುನಾವಣೆ ರಂಗೇರಲಾರಂಭಿಸಿದೆ ಮಾರಾಯ್ರೆ. ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತನ್ನ ಅಕ್ಕನಿಗೆ ಪಡೆಯುವಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಫಲರಾಗಿದ್ದು ಹಳೆ ವಿಷಯ. ಹೊಸ ಸಂಗತಿಯೆಂದರೆ ಗೀತಾ ಶಿವರಾಜಕುಮಾರ್ ಇಂದು ವಿದ್ಯುತ್ತವಾಗಿ ಚುನಾವಣಾ ಪ್ರಚಾರವನ್ನು ಕ್ಷೇತ್ರದಲ್ಲಿ ಆರಂಭಿಸಿದ್ದಾರೆ. ಅವರ ಜೊತೆ ಯಾರಿದ್ದಾರೆ ಅಂತ ನೋಡಿ. ಗೀತಾ ಅವರ ಪತಿ ಮತ್ತು ಕನ್ನಡ ಚಿತ್ರರಂಗದ ಜನಪ್ರಿಯ ನಟ ಶಿವರಾಜಕುಮಾರ್! ನಿಮಗೆ ನೆನಪಿರಬಹುದು, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಶಿವಣ್ಣ ತಮ್ಮ ಬಾಮೈದ ಮಧು ಬಂಗಾರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಗದೀಶ್ ಶೆಟ್ಟರ್ ಪರ ಪ್ರಚಾರ ನಡೆಸಿದ್ದರು. ಹಾಗೆ ನೋಡಿದರೆ ಗೀತಾ ಅವರಿಗೆ ರಾಜಕಾರಣ ಹೊಸದೇನೂ ಅಲ್ಲ.

2014ರ ಲೋಕಸಭಾ ಚುನಾವಣೆಯಲ್ಲಿ ಅವರು ಇದೇ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಎಸ್ ಯಡಿಯೂರಪ್ಪ ವಿರುದ್ಧ ಸೋತಿದ್ದರು. ಇವತ್ತು ಗೀತಾ ತಮ್ಮ ಪತಿಯೊಂದಿಗೆ ಭದ್ರಾವತಿಯಿಂದ ಪ್ರಚಾರ ಆರಂಭಿಸಿದರು. ಅವರಿಬ್ಬರೊಂದಿಗೆ ಸ್ಥಳೀಯ ಶಾಸಕ ಬಿಕೆ ಸಂಗಮೇಶ್ ಮತ್ತು ಸಾಗರದ ಬೇಳೂರು ಗೋಪಾಲಕೃಷ್ಣರನ್ನು ನೋಡಬಹುದು. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಮಗಳು ಮತ್ತು ದೊಡ್ಮನೆಯ ಸೊಸೆಗೆ ವೋಟು ನೀಡಿ ಅಂತ ಅಪೀಲ್ ಮಾಡುತ್ತಿರುವುದು ಕೇಳಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ‘ಮತ್ತೊಮ್ಮೆ ಮೋದಿ 2024’ ಗೋಡೆ ಬರಹ ಅಭಿಯಾನಕ್ಕೆ ಬಿಎಸ್ ಯಡಿಯೂರಪ್ಪ ಚಾಲನೆ