ಯಡಿಯೂರಪ್ಪ ಕುಟುಂಬಕ್ಕೆ ಸೆಡ್ಡು ಹೊಡೆದಿರುವಂತಿದೆ ಹಿರಿಯ ನಾಯಕ ಈಶ್ವರಪ್ಪ ಧೋರಣೆ!

ಯಡಿಯೂರಪ್ಪ ಕುಟುಂಬಕ್ಕೆ ಸೆಡ್ಡು ಹೊಡೆದಿರುವಂತಿದೆ ಹಿರಿಯ ನಾಯಕ ಈಶ್ವರಪ್ಪ ಧೋರಣೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 20, 2024 | 1:03 PM

ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಸಿಟಿ ರವಿ ಹೆಸರುಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಚಿಸದೆ ಯಡಿಯೂರಪ್ಪ ದೆಹಲಿಗೆ ಹೋಗಿ ತಮ್ಮ ಮಗನಿಗೆ ಅದನ್ನು ಕೊಡಿಸಿದ್ದದ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನ ಮತ್ತು ನೋವಿದೆ ಎಂದು ಈಶ್ವರಪ್ಪ ಹೇಳಿದರು.

ಶಿವಮೊಗ್ಗ: ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ನಿಶ್ಚಯಿಸಿಕೊಂಡಿರುವ ಗುರಿಗಳು ಸ್ಪಷ್ಟವಾಗಿವೆ. ಈ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿವೈ ರಾಘವೇಂದ್ರರನ್ನು (BY Raghavendra) ಸೋಲಿಸುವುದು, ಅವರ ಸಹೋದರ ಬಿವೈ ವಿಜಯೇಂದ್ರರನ್ನು (BY Vijayendra) ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದು ಮತ್ತು ಅವರೇ ಹೇಳುವಂತೆ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿರುವ ಬಿಎಸ್ ಯಡಿಯೂರಪ್ಪರಿಗೆ (BS Yediyurappa) ಪಾಠ ಕಲಿಸುವುದು! ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಸಿಟಿ ರವಿ ಹೆಸರುಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಚಿಸದೆ ಯಡಿಯೂರಪ್ಪ ದೆಹಲಿಗೆ ಹೋಗಿ ತಮ್ಮ ಮಗನಿಗೆ ಅದನ್ನು ಕೊಡಿಸಿದ್ದದ ಬಗ್ಗೆ ಕಾರ್ಯಕರ್ತರಲ್ಲಿ ಅಸಮಾಧಾನ ಮತ್ತು ನೋವಿದೆ ಎಂದರು.

ಚುನಾವಣಾ ರಾಜಕೀಯ ಬೇಕಿಲ್ಲ ಅಂತ ತಾನು ಪತ್ರ ಬಿಸಾಕಿದ ಬಳಿಕ ಪಕ್ಷ ಸಂಘಟನೆ ಕೆಲಸ ಕೊಡಿ ಅಂತೆ ಕೇಳಿದರೂ ಕೊಡಲಿಲ್ಲ ಎಂದ ಈಶ್ವರಪ್ಪ, ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುವ ತನಗಾದರೂ ರಾಜ್ಯಾಧ್ಯಕ್ಷನ ಸ್ಥಾನ ನೀಡಬೇಕಿತ್ತು ಎಂದರು. ಬಿಜೆಪಿ ಕಟ್ಟಾಳು ಮತ್ತು ಹಿಂದೂತ್ವವನ್ನು ಬಲವಾಗಿ ಪ್ರತಿಪಾದಿಸುವ ತಾನು ಯಡಿಯೂರಪ್ಪರ ಸರ್ವಾಧಿಕಾರಿ ದೋರಣೆಯನ್ನು ವಿರೋಧಿಸಿ ಅವರ ಮಗನ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವೆ, ಚುನಾವಣೆಯಲ್ಲಿ ಗೆದ್ದ ಬಳಿಕ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಎಂದು ಮೊದಲು ಕೈಯೆತ್ತುವವನು ತಾನೇ ಎಂದು ಈಶ್ವರಪ್ಪ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯಡಿಯೂರಪ್ಪಗೆ ತಮ್ಮ ಮಕ್ಕಳು ಉದ್ಧಾರವಾಗೋದಷ್ಟೇ ಮುಖ್ಯ, ಪಕ್ಷದ ಸಂಘಟನೆ ಬೇಕಿಲ್ಲ: ಕೆಎಸ್ ಈಶ್ವರಪ್ಪ