ಶಿರಸಿ ಮಾರಿಕಾಂಬಾ ರಥೋತ್ಸವಕ್ಕೆ ಚಾಲನೆ: ಜಾತ್ರೆಗೆ 30 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರಿಕ್ಷೆ

ಶಿರಸಿ ಮಾರಿಕಾಂಬಾ ರಥೋತ್ಸವಕ್ಕೆ ಚಾಲನೆ: ಜಾತ್ರೆಗೆ 30 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರಿಕ್ಷೆ

ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ

Updated on: Mar 20, 2024 | 12:04 PM

ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ರಥೋತ್ಸವಕ್ಕೆ ಇಂದು ದೇವಸ್ಥಾನ ಆಡಳಿತ ಮಂಡಳಿ ಚಾಲನೆ ನೀಡಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬಾ ದೇವಿ ಜಾತ್ರೆ ಮಾರ್ಚ್ 19 ರಿಂದ ಬರೊಬ್ಬರಿ 9 ದಿನಗಳ ಕಾಲ ಜರುಗಲಿದೆ. ನಿನ್ನೆ ದೇವಿಯ ಕಂಕಣ ಶಾಸ್ತ್ರ ಮಾಡಲಾಗಿದೆ.

ಕಾರವಾರ, ಮಾರ್ಚ್​ 20: ಇಂದಿನಿಂದ 9 ದಿನಗಳ ಕಾಲ ನಡೆಯಲಿರುವ ರಾಜ್ಯದ ಶಕ್ತಿ ಪಿಠಗಳಲ್ಲಿ ಒಂದಾದ ಪ್ರಸಿದ್ಧ ಶಿರಸಿ ಮಾರಿಕಾಂಬಾ ರಥೋತ್ಸವಕ್ಕೆ (sirsi marikamba jatra) ಧಾರ್ಮಿಕ ವಿಧಿ ಮೂಲಕ ಇಂದು ದೇವಸ್ಥಾನ ಆಡಳಿತ ಕಮಿಟಿ ಚಾಲನೆ ನೀಡಿದೆ. ಶಿರಸಿಯ ಬನವಾಸಿ ರಸ್ತೆಯ ಮಾರಿಗುಡಿಯಿಂದ ಹಳೆ ಬಸ್ ನಿಲ್ದಾಣದ ಗದ್ದುಗೆವರೆಗೆ ರಥೋತ್ಸವ ತೆರಳುತ್ತದೆ. ರಾಜ್ಯದ ಎರಡನೇ ಅತೀ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಡೆದಿರುವ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ರಥೋತ್ಸವದಲ್ಲಿ ಈ ಬಾರಿ ಸುಮಾರು 30 ಲಕ್ಷಕ್ಕೂ ಅಧಿಕ ಭಕ್ತರು ಬರುವ ಸಾಧ್ಯತೆ ಇದ್ದು, ದೇವಸ್ಥಾನ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.