ರಾಮನಗರದ ಗೋದಾಮೊಂದರಲ್ಲಿ ಸಾವಿರಾರು ಸೀರೆ ಪತ್ತೆ, ದಾಸ್ತಾನು ಶಾಸಕ ಇಕ್ಬಾಲ್ ಹುಸ್ಸೇನ್ ಗೆ ಸೇರಿದ್ದು ಎಂದರು ಜೆಡಿಎಸ್ ಕಾರ್ಯಕರ್ತರು

ರಾಮನಗರದ ಗೋದಾಮೊಂದರಲ್ಲಿ ಸಾವಿರಾರು ಸೀರೆ ಪತ್ತೆ, ದಾಸ್ತಾನು ಶಾಸಕ ಇಕ್ಬಾಲ್ ಹುಸ್ಸೇನ್ ಗೆ ಸೇರಿದ್ದು ಎಂದರು ಜೆಡಿಎಸ್ ಕಾರ್ಯಕರ್ತರು

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 20, 2024 | 10:37 AM

ಸ್ಥಳೀಯರು ಹೇಳುವ ಪ್ರಕಾರ ರಾಮನಗರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸ್ಸೇನ್ ಆಪ್ತ ಸಹಾಯಕ ವಾಸಿಮ್ ಹೆಸರಿನ ವ್ಯಕ್ತಿ ಸೀರೆಗಳನ್ನು ಲೋಡ್ ಮಾಡಿಸುತ್ತಿದ್ದ ಮತ್ತು ಸಿಸಿಟಿವಿಯಲ್ಲಿ ಅವನ ಓಡಾಟ ಸೆರೆಯಾಗಿದೆ ಎಂದು ಹೇಳುತ್ತಾರೆ. ವಿಆರ್ ಎಲ್ ಗೋದಾಮಿನಲ್ಲಿ ಪತ್ತೆಯಾಗಿರುವ ಸೀರೆಗಳು ಯಾರಿಗೆ ಸೇರಿದ್ದು ಅನ್ನೋದು ಇನ್ನೂ ಪತ್ತೆಯಾಗಿಲ್ಲ, ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ.

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾರರಿಗೆ ಸೀರೆ ಮತ್ತು ಕುಕ್ಕರ್ ಗಳ ಕೊರತೆ ಇದ್ದಂತಿಲ್ಲ. ರಾಮನಗರದ ಜೆಡಿಎಸ್ ಕಾರ್ಯಕರ್ತರು ಆರೋಪಿಸುತ್ತಿರುವಂತೆ ಕಾಂಗ್ರೆಸ್ ಪಕ್ಷ ಇವುಗಳನ್ನು ಹಂಚುತ್ತಿದೆ. ಜಿಲ್ಲೆ ದ್ಯಾವರಸೇಗೌಡನ ದೊಡ್ಡಿಯಲ್ಲಿ (Dyavarsegowdan Doddi) ಟ್ರಕ್ ಒಂದರಲ್ಲಿ ಲೋಡ್ ಆಗಿದ್ದ ಸೀರೆಗಳು ಪತ್ತೆಯಾಗಿದ್ದು ಜಿಲ್ಲಾಧಿಕಾರಿ ಡಾ ಅವಿನಾಶ್ ಮೆನನ್ ರಾಜೇಂದ್ರನ್ (Dr Avinash Menon Rajendran) ಟ್ರಕ್ ಸೀಜ್ ಮಾಡಿದ್ದನ್ನು ಖಚಿತಪಡಿಸಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ ರಾಮನಗರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸ್ಸೇನ್ ಆಪ್ತ ಸಹಾಯಕ ವಾಸಿಮ್ (Wasim) ಹೆಸರಿನ ವ್ಯಕ್ತಿ ಸೀರೆಗಳನ್ನು ಲೋಡ್ ಮಾಡಿಸುತ್ತಿದ್ದ ಮತ್ತು ಸಿಸಿಟಿವಿಯಲ್ಲಿ ಅವನ ಓಡಾಟ ಸೆರೆಯಾಗಿದೆ ಎಂದು ಹೇಳುತ್ತಾರೆ. ವಿಆರ್ ಎಲ್ ಗೋದಾಮಿನಲ್ಲಿ ಪತ್ತೆಯಾಗಿರುವ ಸೀರೆಗಳು ಯಾರಿಗೆ ಸೇರಿದ್ದು ಅನ್ನೋದು ಇನ್ನೂ ಪತ್ತೆಯಾಗಿಲ್ಲ, ತನಿಖೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳುತ್ತಾರೆ.

ನಿನ್ನೆ ಬೆಂಗಳೂರಲ್ಲಿ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಮಾತಾಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಮತದಾರರಿಗೆ ಕುಕ್ಕರ್ ಗಳನ್ನು ಹಂಚುತ್ತಿದ್ದಾರೆ ಎಂದ ಹೇಳಿ ಸಾಕ್ಷ್ಯದ ರೂಪದಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಬಿಡುಗಡೆ ಮಾಡಿದ್ದರು. ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆವಿನಾಶ್ ಯಾವ ಕ್ರಮ ಜರುಗಿಸುತ್ತಾರೆ ಅಂತ ಕಾದುನೋಡಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹೆಚ್ ಡಿ ಕುಮಾರಸ್ವಾಮಿ ಕುಕ್ಕರ್ ಬಾಂಬ್! ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿಕೆ ಸುರೇಶ್ 4 ಲಕ್ಷಕ್ಕೂ ಹೆಚ್ಚು ಕುಕ್ಕರ್ ಹಂಚಿಕೆ?