ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದಾಗ ಡಿಕೆ ಸಹೋದರು ಕಿರಾತಕರಾಗಿರಲಿಲ್ಲವೇ? ಇಕ್ಬಾಲ್ ಹುಸ್ಸೇನ್, ಶಾಸಕ
ಡಿಕೆ ಸಹೋದರರನ್ನು ಕಿರಾತಕರು ಎಂದಿರುವ ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡ ಇಕ್ಬಾಲ್; ಕುಮಾರಸ್ವಾಮಿಯವರ ಕೈ ಎತ್ತಿ ಇವರೇ ಮುಖ್ಯಮಂತ್ರಿ ಅಂದಾಗ ಮತ್ತು ಅವರ ಪತ್ನಿಯನ್ನು ಶಾಸಕಿಯಾಗಿ ಗೆಲ್ಲಿಸಲು ನೆರವಾದಾಗ ಅವರು ಕಿರಾತಕರು ಆಗಿರಲಿಲ್ಲವೇ ಎಂದು ಪ್ರಶ್ನಿಸಿದರು.
ರಾಮನಗರ: ನಿಖಿಲ್ ಕುಮಾರಸ್ವಾಮಿ (Nikhil Kumaraswamy ) ಸೋಲಿನ ಸೇಡನ್ನು ತೀರಿಸಿಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿರುವುದನ್ನು ರಾಮನಗರದ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸ್ಸೇನ್ (Iqbal Hussain) ಲೇವಡಿ ಮಾಡಿದರು. ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ರಾಮನಗರದಲ್ಲಿ ಡಿಕೆ ಸಹೋದರರ ಪ್ರಭಾವ ಕಡಿಮೆ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ, ಬಹಳ ಜನ ಬಂದು ಹೋಗಿದ್ದಾರೆ, ಆದರೆ ಅವರನ್ನು ಅಲ್ಲಾಡಿಸುವುದು ಯಾರಿಗೂ ಸಾಧ್ಯವಾಗಿಲ್ಲ, ಈಗ ಕುಮಾರಸ್ವಾಮಿಯವರು ತಮ್ಮ ಭಾವ ಡಾ ಸಿಎನ್ ಮಂಜುನಾಥ್ ಅವರನ್ನು ಕರೆತಂದು ಹರಕೆಯ ಕುರಿ ಮಾಡುತ್ತಿದ್ದಾರೆ ಎಂದು ಇಕ್ಬಾಲ್ ಹುಸ್ಸೇನ್ ಹೇಳಿದರು. ಡಿಕೆ ಸಹೋದರರನ್ನು ಕಿರಾತಕರು ಎಂದಿರುವ ಕುಮಾರಸ್ವಾಮಿಯವರನ್ನು ತರಾಟೆಗೆ ತೆಗೆದುಕೊಂಡ ಇಕ್ಬಾಲ್; ಕುಮಾರಸ್ವಾಮಿಯವರ ಕೈ ಎತ್ತಿ ಇವರೇ ಮುಖ್ಯಮಂತ್ರಿ ಅಂದಾಗ ಮತ್ತು ಅವರ ಪತ್ನಿಯನ್ನು ಶಾಸಕಿಯಾಗಿ ಗೆಲ್ಲಿಸಲು ನೆರವಾದಾಗ ಅವರು ಕಿರಾತಕರು ಆಗಿರಲಿಲ್ಲವೇ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಈಗ ಅಪ್ಪಟ ಬಿಜೆಪಿ ವಕ್ತಾರನಂತೆ ಮಾತಾಡುತ್ತಿದ್ದಾರೆ. ತಮ್ಮ ಹೆಗಲ ಮೇಲೆ ಯಾವ್ಯಾವುದೋ ಶಾಲು ಹೊದ್ದು ತಮ್ಮ ಮೂಲ ಶಾಲನ್ನೇ ಮರೆತುಬಿಟ್ಟಿದ್ದಾರೆ ಎಂದು ಶಾಸಕ ಹೇಳಿದರು. ರಾಮನಗರದಲ್ಲಿ ಜಾತಿ ಆಧಾರದಲ್ಲಿ ಚುನಾವಣೆ ನಡೆಯಲ್ಲ, ಇಲ್ಲಿ ಕಾಂಗ್ರೆಸ್ ರೀತಿ-ನೀತಿ-ಪ್ರೀತಿಯ ರಾಜಕಾರಣ ಮಾಡಿಕೊಂಡು ಬಂದಿದೆ ಎಂದು ಇಕ್ಬಾಲ್ ಹುಸ್ಸೇನ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನನ್ನ ಮತ್ತು ಕುಮಾರಸ್ವಾಮಿ ನಡುವೆ ರಾಜಕೀಯ ವೈಷಮ್ಯವಿರಲಿಲ್ಲ; ಬೇರೆ ಬೇರೆ ಪಕ್ಷಗಳಲ್ಲಿದ್ದೆವು, ಅಷ್ಟೇ: ಸಿಪಿ ಯೋಗೇಶ್ವರ್