ಹಾಲು ದರ ಹೆಚ್ಚಳ; ಬಸ್ ಪ್ರಯಾಣದಲ್ಲಿ ಉಳಿಯುವ ಹಣವನ್ನು ಹಾಲು-ಮೊಸರಿಗೆ ಸುರಿಯಬೇಕೇ, ಇದ್ಯಾವ ಸೀಮೆ ನ್ಯಾಯ?: ಶಿವಮೊಗ್ಗ ಗೃಹಿಣಿಯರು

|

Updated on: Aug 01, 2023 | 10:49 AM

ದರ ಹೆಚ್ಚಳಕ್ಕೆ ಸಂಬಂಧಪಟ್ಟವರು ಹೊಣೆಗಾರಿಕೆಯನ್ನು ಬೇರೆಯವರ ಮೇಲೆ ಜಾರಿಸಿ ನಂದಿನಿ ತುಪ್ಪದಿಂದ ಕೈತೊಳೆದು, ನಂದಿನಿ ಹಾಲು ಕುಡಿದು ಸುಮ್ಮನಾಗುತ್ತಿದ್ದಾರೆ!

ಶಿವಮೊಗ್ಗ: ಬಸ್ ಪ್ರಯಾಣದಲ್ಲಿ ಉಳಿಯುವ ಹಣವನ್ನು ಹಾಲಿಗೆ ಸುರಿಯಬೇಕೇ? ವಿದ್ಯುತ್ ದರ ಕೂಡ ಹೆಚ್ಚಿಸಲಾಗಿದೆ, ಮಧ್ಯಮ ವರ್ಗದ ಕುಟುಂಬಗಳ ಬಗ್ಗೆ ಸರ್ಕಾರಕ್ಕೇನಾದರೂ ಕಾಳಜಿ ಇದೆಯೇ? ಹಾಲಿನ ದರ ಹೆಚ್ಚಿಸುವುದಾದರೆ 10 ಪೈಸೆ, 20 ಪೈಸೆ ಹೆಚ್ಚಿಸಲಿ, ಲೀಟರ್ ಗೆ ರೂ. 3 ಹೆಚ್ಚಿಸಿರುವುದು ಬಡವರ ಮೇಲೆ ನಿಸ್ಸಂದೇಹವಾಗಿ ಹೊರೆ. ನಂದಿನಿ ಹಾಲಿನ (Nandini milk) ದರ ಇಂದಿನಿಂದ ಪ್ರತಿ ಲೀಟರ್ ಗೆ ರೂ. 3 ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಮಹಿಳೆಯರು (Shivamogga homemakers) ಹೀಗೆ ಪ್ರತಿಕ್ರಿಯಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇನೋ (CM Siddaramaiah) ಇದು ಕರ್ನಾಟಕ ಮಿಲ್ಕ್ ಫೆಡರೇಶನ್ (KMF) ನಿರ್ಧಾರ, ತನ್ನನ್ನು ಸಭೆಗೆ ಕರೆಸಲಾಗಿತ್ತು, ಹೋಗಿದ್ದು ಅಷ್ಟೇ ಅಂತ ಹೇಳಿ ತನಗೂ ಹಾಲಿನ ಬೆಲೆಯೇರಿಕೆಗೂ ಸಂಬಂಧವಿಲ್ಲ ಅನ್ನೋ ಹಾಗೆ ಮಾತಾಡಿದರು. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ದರ ಹೆಚ್ಚಳ ಒಕ್ಕೂಟದ್ದು ನಿಜ; ಆದರೆ, ಅದಕ್ಕೆ ಸರ್ಕಾರದ ಸಮ್ಮತಿ ಪಡೆದಿಕೊಂಡಿರಲಾಗುತ್ತದೆ ಎನ್ನುತ್ತಾರೆ. ಸಂಬಂಧಪಟ್ಟವರು ಹೊಣೆಗಾರಿಕೆಯನ್ನು ಹೀಗೆ ಬೇರೆಯವರ ಮೇಲೆ ಜಾರಿಸಿ ನಂದಿನಿ ತುಪ್ಪದಿಂದ ಕೈತೊಳೆದು, ನಂದಿನಿ ಹಾಲು ಕುಡಿದು ಸುಮ್ಮನಾಗುತ್ತಿದ್ದಾರೆ. ಸಂಕಟ ಪಡುತ್ತಿರುವವರು ಮಾತ್ರ ಬಡವ ಮತ್ತು ಮಧ್ಯಮ ವರ್ಗದ ಕುಟುಂಬಗಳು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on