ನನ್ ಮಗಳು ಇರುವಾಗಲೇ ಅಳಿಯ ಅಕ್ಕನ ಮಗಳ ಜತೆ..:ಸರ್ಕಾರಿ ನೌಕರ ಅಳಿಯನ ನವರಂಗಿ ಆಟ ಬಿಚ್ಚಿಟ್ಟ ಅತ್ತೆ

Updated on: Nov 26, 2025 | 5:13 PM

ಗಂಡನ ಮನೆಯವರ ಕಿರುಕುಳ ತಾಳಲಾರದೆ ನವವಿವಾಹಿತೆಯೋರ್ವಳುನಾಲೆಗೆ ಹಾರಿದ್ದಾಳೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಬಳಿ ಘಟನೆ ನಡೆದಿದೆ. ಗಂಡ ಹಾಗೂ ಆತನ ಮನೆಯವರ ಕಿರುಕುಳ ತಾಳಲಾರದೇ ನವವಿವಾಹಿತೆ ಲತಾ ಭದ್ರಾ ಬಲದಂಡೆ ನಾಲೆಗೆ ಹಾರಿದ್ದಾಳೆ. ಭದ್ರಾವತಿಯ ಭದ್ರಾ ಡ್ಯಾಂನ ಕೆಪಿಸಿಎಲ್ ನಲ್ಲಿ ಎಇಇ ಆಗಿರುವ ಗುರುರಾಜ್ ಜೊತೆ ಏಳು ತಿಂಗಳ ಹಿಂದಷ್ಟೇ ಮದುವೆಯಾಗುತ್ತು.

ಶಿವಮೊಗ್ಗ (ನವೆಂಬರ್ 26): ಗಂಡನ ಮನೆಯವರ ಕಿರುಕುಳ ತಾಳಲಾರದೆ ನವವಿವಾಹಿತೆಯೋರ್ವಳುನಾಲೆಗೆ ಹಾರಿದ್ದಾಳೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹಂಚಿನ ಸಿದ್ದಾಪುರ ಬಳಿ ಘಟನೆ ನಡೆದಿದೆ. ಗಂಡ ಹಾಗೂ ಆತನ ಮನೆಯವರ ಕಿರುಕುಳ ತಾಳಲಾರದೇ ನವವಿವಾಹಿತೆ ಲತಾ ಭದ್ರಾ ಬಲದಂಡೆ ನಾಲೆಗೆ ಹಾರಿದ್ದಾಳೆ. ಭದ್ರಾವತಿಯ ಭದ್ರಾ ಡ್ಯಾಂನ ಕೆಪಿಸಿಎಲ್ ನಲ್ಲಿ ಎಇಇ ಆಗಿರುವ ಗುರುರಾಜ್ ಜೊತೆ ಏಳು ತಿಂಗಳ ಹಿಂದಷ್ಟೇ ಮದುವೆಯಾಗುತ್ತು. ಅಳಿಯ ಸರ್ಕಾರಿ ನೌಕರ ಎಂದು ಲತಾ ಕುಟುಂಬದವರು 30 ಗ್ರಾಂ ಚಿನ್ನಾಭರಣ, 10 ಲಕ್ಷ ನಗದು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದ್ರೆ, ಮದ್ವೆಯಾದ ಒಂದೇ ವರ್ಷದಲ್ಲಿ ಸರ್ಕಾರಿ ನೌಕರ ಅಳಿಯನ ನವರಂಗಿ ಆಟ ಬಯಲಿಗೆ ಬಂದಿದೆ. ಲತಾ ಎನ್ನುವ ಮಹಿಳೆಯನ್ನು ಮದ್ವೆಯಾಗಿದ್ದರೂ ಸಹ ಗುರುರಾಜ್, ತನ್ನ ಅಕ್ಕನ ಮಗಳ ಜೊತೆ ಕೆಟ್ಟದಾಗಿ ಇರ್ತಿದ್ನಂತೆ ಎಂದು ಲತಾ ತಾಯಿ ಅಳಿಯನ ನವರಂಗಿ ಆಟ ಬಿಚ್ಚಿಟ್ಟಿದ್ದಾಳೆ.

Published on: Nov 26, 2025 05:11 PM