PM Modi in Shivamogga: ಶಿವಮೊಗ್ಗದ ಸಂಸದ, ಶಾಸಕರಿಂದ ಪ್ರಧಾನಿಗಳಿಗೆ ಸನ್ಮಾನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಕಪ್ರೇಕ್ಷಕ!

Arun Kumar Belly

|

Updated on: Feb 27, 2023 | 1:27 PM

ಶಾಸಕ ಹರತಾಳು ಹಾಲಪ್ಪನವರು ಪ್ರಧಾನಿಗಳಿಗೆ ಶ್ರೀಗಂಧದಲ್ಲಿ ತಯಾರಿಸಿದ ಶಿವಮೊಗ್ಗ ವಿಮಾನ ನಿಲ್ದಾಣದ ಪ್ರತಿಕೃತಿಯನ್ನು ಕಾಣಿಕೆಯಾಗಿ ನೀಡಿದರು. ಇದೆಲ್ಲ ನಡೆಯುತ್ತಿರಬೇಕಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಕಪ್ರೇಕ್ಷಕನಂತೆ ನಿಂತಿದ್ದರು!

ಶಿವಮೊಗ್ಗ: ನಗರದಲ್ಲಿ ನಿರ್ಮಿಸಲಾಗಿರುವ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟಿಸಲು ಅಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ವೇದಿಕೆಯ ಮೇಲೆ ರಾಜ್ಯದ ನಾಯಕರು ಒಬ್ಬೊಬ್ಬರಾಗಿ ಸನ್ಮಾನಿಸಿದರು. ಸ್ಥಳೀಯ ಶಾಸಕ ಕೆಎಸ್ ಈಶ್ವರಪ್ಪ (KS Eshwarappa) ಪ್ರಧಾನಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿದರೆ, ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಹೂವಿನ ಹಾರ ತೊಡಿಸಿದರು. ನಂತರ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಿಎಸ್ ಯಡಿಯೂರಪ್ಪನವರು (BS Yediyurappa) ವಿಶೇಷವಾಗಿ ತಯಾರಿಸಲಾದ ಪೇಟವನ್ನು ಪ್ರಧಾನಿಗಳಿಗೆ ತೊಡಿಸಿ ಗೌರವಿಸಿದರು. ಅದಾದ ಮೇಲೆ ಶಾಸಕ ಹರತಾಳು ಹಾಲಪ್ಪನವರು ಪ್ರಧಾನಿಗಳಿಗೆ ಶ್ರೀಗಂಧದಲ್ಲಿ ತಯಾರಿಸಿದ ಶಿವಮೊಗ್ಗ ವಿಮಾನ ನಿಲ್ದಾಣದ ಪ್ರತಿಕೃತಿಯನ್ನು ಕಾಣಿಕೆಯಾಗಿ ನೀಡಿದರು. ಇದೆಲ್ಲ ನಡೆಯುತ್ತಿರಬೇಕಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೂಕಪ್ರೇಕ್ಷಕನಂತೆ ನಿಂತಿದ್ದರು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada