ಬೆಳಗಾವಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಶಿವಮೊಗ್ಗದಲ್ಲಿ ನೂತನ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿ ಬೆಳಗಾವಿ ತಲುಪಿದ್ದಾರೆ. ಸಿಹಿತಿಂಡಿ ಕುಂದಾಗೆ (Kunda) ಫೇಮಸ್ಸಾಗಿರುವ ಬೆಳಗಾವಿಯಲ್ಲಿ ರೂ. 2,700 ಕೋಟಿ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಅದಕ್ಕೂ ಮೊದಲು ಅವರು ಸುಮಾರು 8 ಕಿಮೀ ಉದ್ದ ರೋಡ್ ಶೋ (road show) ನಡೆಸಲಿದ್ದಾರೆ. ನಿಮಗೆ ಆಶ್ಚರ್ಯವಾಗಬಹುದು, ಪ್ರಧಾನಿ ಮೋದಿ ಶಿವಮೊಗ್ಗಗೆ ಆಗಮಿಸುವ ಮೊದಲೇ ಬೆಳಗಾವಿಯಲ್ಲಿ ರೋಡ್ ಶೋ ನಡೆಯುವ ರಸ್ತೆಗುಂಟ ಜನ ನೆರೆಯಲಾರಂಭಿಸಿದ್ದರು. ನೆತ್ತಿಯ ಮೇಲೆ ಪ್ರಖರ ಬಿಸಿಲಿನಿಂದ ಬಾಯಾರುತ್ತಿದ್ದರೂ ಅವರು ಬೇಸರಿಸಿಕೊಳ್ಳದೆ ಪ್ರಧಾನಿಗಳ ಆಗಮನಕ್ಕಾಗಿ ಕಾಯುತ್ತಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ