ತಾಯಿ, ಮಗ ಆತ್ಮಹತ್ಯೆ: ಪೊಲೀಸರು ಬಿಚ್ಚಿಟ್ರು ಮೊದಲ ಸೊಸೆ ಸಾವಿನ ರಹಸ್ಯ

Edited By:

Updated on: Dec 05, 2025 | 10:57 PM

ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆ ವೈದ್ಯೆ ಮತ್ತು ಪುತ್ರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಿನ್ನೆ ನಡೆದಿದೆ. ಇತ್ತೀಚೆಗೆ ಇದೇ ಸೊಸೆ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನು ಪ್ರಕರಣ ಕುರಿತಾಗಿ ಶಿವಮೊಗ್ಗ ಎಎಸ್​ಪಿ ಎ.ಜಿ.ಕಾರಿಯಪ್ಪ ಮಾಹಿತಿ ನೀಡಿದ್ದಾರೆ. ವಿಡಿಯೋ ನೋಡಿ.

ಶಿವಮೊಗ್ಗ, ಡಿಸೆಂಬರ್​ 05: ಅಶ್ವತ್ಥ್ ಬಡಾವಣೆಯ ಮನೆಯಲ್ಲಿ ನಿನ್ನೆ ನಗರದ ಪ್ರತಿಷ್ಠಿತ ಆಸ್ಪತ್ರೆ ವೈದ್ಯೆ ಮತ್ತು ಪುತ್ರ ಆತ್ಮಹತ್ಯೆಗೆ ಶರಣಾಗಿರುವಂತಹ ಘಟನೆ ನಡೆದಿದೆ. ವೈದ್ಯೆ ಡೆತ್​​ನೋಟ್ ಬರೆದಿಟ್ಟು ಮೃತಪಟ್ಟಿದ್ದಾರೆ. ಮಗ ಕೂಡಾ ನೇಣಿಗೆ ಶರಣಾಗಿದ್ದಾರೆ. ಮೃತರ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನು ಪ್ರಕರಣ ಕುರಿತಾಗಿ ಶಿವಮೊಗ್ಗ ಎಎಸ್​ಪಿ ಎ.ಜಿ.ಕಾರಿಯಪ್ಪ ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.