ಶಿವಾನಂದ ಪಾಟೀಲ್ ಮತ್ತು ಬಸನಗೌಡ ಯತ್ನಾಳ್ ಒಟ್ಟಿಗೆ ಹೋಗಿ ರಾಜೀನಾಮೆ ಸಲ್ಲಿಸಲಿ: ಎಸ್​ಅರ್ ವಿಶ್ವನಾಥ್

ಅರುಣ್​ ಕುಮಾರ್​ ಬೆಳ್ಳಿ

Updated on: May 05, 2025 | 12:56 PM

ಬಸನಗೌಡ ಯತ್ನಾಳ್ ಮತ್ತು ಶಿವಾನಂದ ಪಾಟೀಲ್ ತಮ್ಮ ಮಾತು ಹಾಗೂ ಕಾರ್ಯಗಳಿಂದ ಜನರ ದಿಕ್ಕು ತಪ್ಪಿಸುವ ಬದಲು ಇಬ್ಬರೂ ಒಟ್ಟಿಗೆ ವಿಧಾನಸಭಾಧ್ಯಕ್ಷರ ಬಳಿಗೆ ಹೋಗಿ ರಾಜೀನಾನಮೆ ಪತ್ರ ಸಲ್ಲಿಸಲಿ ಮತ್ತು ಯಾವ ಕ್ಷೇತ್ರದಿಂದ ತಾವಿಬ್ಬರು ಪ್ರತಿಸ್ಪರ್ಧಿಗಳಾಗಿ ಸ್ಪರ್ಧಿಸಬೇಕೆಂದು ನಿರ್ಧರಿಸಿ ಚುನಾವಣೆ ಎದುರಿಸಲಿ ಎಂದು ಬಿಜೆಪಿ ಶಾಸಕ ವಿಶ್ವನಾಥ್ ಹೇಳಿದರು.

ಬೆಂಗಳೂರು, ಮೇ 5: ಬಿಜೆಪಿ ಶಾಸಕ ಎಸ್​ಅರ್ ವಿಶ್ವನಾಥ್, ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರಿಂದ ಸಮಾನ ಅಂತರವನ್ನು ಕಾಯ್ದುಕೊಂಡಂತಿದೆ. ಶಿವಾನಂದ ಕಾಂಗ್ರೆಸ್ ಪಕ್ಷದವರಾದರೆ ಬಸನಗೌಡ ಬಿಜೆಪಿಯಿಂದ ಉಚ್ಚಾಟಿತರು! ನಗರದಲ್ಲಿಂದು ಮಾತಾಡಿದ ವಿಶ್ವನಾಥ್ ಅವರು ಶಿವಾನಂದ ಪಾಟೀಲ್ ರಾಜೀನಾಮೆ ಸಲ್ಲಿಸಿರುವುದು ಒಂದು ನಾಟಕ, ರಾಜೀನಾಮೆ ಸಲ್ಲಿಸುವವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಅಂತಷ್ಟೇ ತಮ್ಮ ಪತ್ರದಲ್ಲಿ ಬರೆಯುತ್ತಾರೆ, ಷರತ್ತುಬದ್ಧ ರಾಜೀನಾಮೆ ಪತ್ರ ಅಂಗೀಕಾರ ಅಗೋದಿಲ್ಲ ಶಿವಾನಂದಗೂ ಗೊತ್ತು, ಹಾಗಾಗಿ ಬರೀ ಡ್ರಾಮಾ ಎಂದು ಹೇಳಿದರು.

ಇದನ್ನೂ ಓದಿ:  ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಖಡ್ಗ ನೀಡಿ ಸತ್ಕರಿಸಿದ ಎಸ್​ಅರ್ ವಿಶ್ವನಾಥ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.