ಪುನೀತ್-ಶಿವಣ್ಣ ಈ ಸಿನಿಮಾದಲ್ಲಿ ಒಟ್ಟಿಗೆ ನಟಿಸಬೇಕಿತ್ತು; ಹೊರಬಿತ್ತು ಅಚ್ಚರಿ ವಿಚಾರ
ಪುನೀತ್ ಹಾಗೂ ಶಿವರಾಜ್ಕುಮಾರ್ ಒಂದೇ ಸಿನಿಮಾದಲ್ಲಿ ನಟಿಸಬೇಕಿತ್ತಂತೆ. ಈ ವಿಚಾರವನ್ನು ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಬಿಚ್ಚಿಟ್ಟಿದ್ದಾರೆ.
ಪುನೀತ್ ನಿಧನ ಹೊಂದಿ ಹಲವು ದಿನಗಳು ಕಳೆದಿವೆ. ಆದಾಗ್ಯೂ ಅವರನ್ನು ನೆನಪು ಮಾಡಿಕೊಳ್ಳುವ ಕಾರ್ಯ ಮಾತ್ರ ಇನ್ನೂ ನಿಂತಿಲ್ಲ. ಅಭಿಮಾನಿಗಳ ಕಣ್ಣೀರು ಹಾಗೂ ನೋವು ಕೂಡ ಕಡಿಮೆ ಆಗಿಲ್ಲ. ಈ ಮಧ್ಯೆ ಪುನೀತ್ ಕುರಿತು ಸಾಕಷ್ಟು ವಿಚಾರಗಳು ಈಗ ಹೊರ ಬರುತ್ತಿವೆ. ಈ ವಿಚಾರ ಕೇಳಿ ಅಭಿಮಾನಿಗಳು ಅಚ್ಚರಿ ಹೊರ ಹಾಕುತ್ತಿದ್ದಾರೆ. ಈಗ ಮತ್ತೊಂದು ವಿಚಾರ ಬಹಿರಂಗವಾಗಿದೆ. ಪುನೀತ್ ಹಾಗೂ ಶಿವರಾಜ್ಕುಮಾರ್ ಒಂದೇ ಸಿನಿಮಾದಲ್ಲಿ ನಟಿಸಬೇಕಿತ್ತಂತೆ. ಈ ವಿಚಾರವನ್ನು ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಬಿಚ್ಚಿಟ್ಟಿದ್ದಾರೆ.
‘ಟಗರು’ ಸಿನಿಮಾದಲ್ಲಿ ಶಿವರಾಜ್ಕುಮಾರ್ ನಟಿಸಿದ್ದರು. ‘ಟಗರು 2’ಗೆ ಶ್ರೀಕಾಂತ್ ಸಿದ್ಧತೆ ಮಾಡಿಕೊಂಡಿದ್ದರು. ಈ ಸಿನಿಮಾದಲ್ಲಿ ಪುನೀತ್ ಕೂಡ ನಟಿಸಬೇಕಿತ್ತು. ಈ ಕುರಿತಂತೆ ಮಾತುಕತೆ ಕೂಡ ನಡೆದಿತ್ತು ಎನ್ನುವ ವಿಚಾರವನ್ನು ಶ್ರೀಕಾಂತ್ ಬಿಚ್ಚಿಟ್ಟಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ‘ಭಜರಂಗಿ 2’ ಸಿನಿಮಾ ನೋಡಿದ ನಂತರ ಮಹತ್ವದ ಘೋಷಣೆ ಮಾಡಿದ ಶಿವರಾಜ್ಕುಮಾರ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?

