‘ಜೈಲರ್​’ ಹಿಟ್​ ಆದ್ಮೇಲೆ ಪರಭಾಷೆಯಿಂದ ಶಿವಣ್ಣ ಪಡೆದ ಸಿನಿಮಾ ಆಫರ್​ ಒಂದಲ್ಲ ಎರಡಲ್ಲ

Updated on: Oct 18, 2023 | 6:56 PM

‘ಜೈಲರ್​’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಮಾಡಿದ್ದು ಅತಿಥಿ ಪಾತ್ರವಾದರೂ ಅದಕ್ಕೆ ಸಿಕ್ಕ ರೆಸ್ಪಾನ್ಸ್​ ಬಹಳ ದೊಡ್ಡದು. ಆ ಯಶಸ್ಸಿನ ಬಳಿಕ ಅವರಿಗೆ ಪರಭಾಷೆಯಿಂದ ಹಲವು ಆಫರ್​ಗಳು ಬರುತ್ತಿವೆ. ಪರಭಾಷೆಯಲ್ಲಿ ಮುಖ್ಯ ಭೂಮಿಕೆ ನಿಭಾಯಿಸುವಂತೆ ದೊಡ್ಡ ದೊಡ್ಡ ನಿರ್ದೇಶಕರು ಬಂದು ಕೇಳಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

2023ರ ವರ್ಷ ಶಿವರಾಜ್​ಕುಮಾರ್​ ಅವರ ಪಾಲಿಗೆ ತುಂಬ ವಿಶೇಷವಾಗಿದೆ. ರಜನಿಕಾಂತ್​ ಜೊತೆ ಶಿವಣ್ಣ ನಟಿಸಿದ ‘ಜೈಲರ್​’ ಸಿನಿಮಾ (Jailer Movie) ಸೂಪರ್​ ಹಿಟ್​ ಆಯಿತು. ಆ ಚಿತ್ರದಲ್ಲಿ ಶಿವರಾಜ್​ಕುಮಾರ್​ (Shivarajkumar) ಮಾಡಿದ್ದು ಅತಿಥಿ ಪಾತ್ರವಾದರೂ ಅದಕ್ಕೆ ಸಿಕ್ಕ ರೆಸ್ಪಾನ್ಸ್​ ಬಹಳ ದೊಡ್ಡದು. ‘ಜೈಲರ್​’ ಚಿತ್ರದ ಯಶಸ್ಸಿನ ಬಳಿಕ ಅವರಿಗೆ ಪರಭಾಷೆಯಿಂದ ಹಲವು ಆಫರ್​ಗಳು ಬರುತ್ತಿವೆ. ಪರಭಾಷೆಯಲ್ಲಿ ಮುಖ್ಯ ಭೂಮಿಕೆ ನಿಭಾಯಿಸುವಂತೆ ದೊಡ್ಡ ದೊಡ್ಡ ನಿರ್ದೇಶಕರು ಬಂದು ಕೇಳಿಕೊಳ್ಳುತ್ತಿದ್ದಾರೆ. ಆ ಎಲ್ಲ ವಿಷಯದ ಬಗ್ಗೆ ಶಿವರಾಜ್​ಕುಮಾರ್​ ಮಾತನಾಡಿದ್ದಾರೆ. ಈಗ ಅವರ ‘ಘೋಸ್ಟ್​’ ಸಿನಿಮಾ (Ghost Movie) ಬಿಡುಗಡೆ ಆಗುತ್ತಿದೆ. ಈ ಚಿತ್ರದ ಬಿಡುಗಡೆ ಪ್ರಯುಕ್ತ ‘ಟಿವಿ 9 ಕನ್ನಡ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಶಿವಣ್ಣ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More