Puneeth Rajkumar: ‘ಈ ಪ್ರಶ್ನೆಗೆ ಉತ್ತರಿಸೋದು ಕಷ್ಟ’; ಗಂಧದ ಗುಡಿ ಬಗ್ಗೆ ಕೇಳಿದ್ದಕ್ಕೆ ಶಿವಣ್ಣ ಪ್ರತಿಕ್ರಿಯೆ

| Updated By: ಮದನ್​ ಕುಮಾರ್​

Updated on: Oct 28, 2022 | 11:55 AM

Shivarajkumar | Gandhada Gudi: ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಪ್ರಕೃತಿ ಉಳಿಸಬೇಕು ಎಂಬ ಸಂದೇಶ ಈ ಡಾಕ್ಯುಮೆಂಟರಿಯಲ್ಲಿ ಇದೆ.

ನಟ ಪುನೀತ್​ ರಾಜ್​ಕುಮಾರ್ (Puneeth Rajkumar) ಅವರ ಅಗಲಿಕೆಯ ನೋವಿನಿಂದ ಹೊರಬರಲು ಕುಟುಂಬದವರಿಗೆ ಎಂದಿಗೂ ಸಾಧ್ಯವಾಗುವುದಿಲ್ಲ. ಅಪ್ಪು ಡ್ರೀಮ್ ಪ್ರಾಜೆಕ್ಟ್​ ಆಗಿದ್ದ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರ ಇಂದು (ಅ.28) ಎಲ್ಲೆಡೆ ರಿಲೀಸ್​ ಆಗಿದೆ. ಇದನ್ನು ನೋಡಿದ ಅನೇಕರು ಭಾವುಕರಾಗುತ್ತಿದ್ದಾರೆ. ಈ ಬಗ್ಗೆ ಕೇಳಿದ್ದಕ್ಕೆ, ‘ಈ ಪ್ರಶ್ನೆಗೆ ಉತ್ತರಿಸೋದು ತುಂಬ ಕಷ್ಟ’ ಎಂದು ಶಿವರಾಜ್​ಕುಮಾರ್​ (Shivarajkumar) ಅವರು ಹೇಳಿದ್ದಾರೆ. ಇಂದು ಸಂಜೆ ಅವರು ‘ಗಂಧದ ಗುಡಿ’ ನೋಡುವುದಾಗಿ ತಿಳಿಸಿದ್ದಾರೆ. ಪ್ರಕೃತಿ ಉಳಿಸಬೇಕು ಎಂಬ ಸಂದೇಶ ಈ ಡಾಕ್ಯುಮೆಂಟರಿಯಲ್ಲಿ ಇದೆ. ಪುನೀತ್​ ಅಭಿಮಾನಿಗಳು ಇದನ್ನು ಬಹಳ ಮೆಚ್ಚಿಕೊಂಡಿದ್ದಾರೆ.