‘ಯಶ್ ಮೇಲೆ ಯಾವಾಗಲೂ ನನಗೆ ಹೆಚ್ಚು ಪ್ರೀತಿ’; ‘ಕೆಜಿಎಫ್ 2’ ನೋಡಿದ ಶಿವಣ್ಣ ಹೇಳಿದ್ದಿಷ್ಟು

Edited By:

Updated on: May 06, 2022 | 8:15 PM

ನಟ ಶಿವರಾಜ್​ಕುಮಾರ್ ಕೂಡ ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಇಂದು (ಏಪ್ರಿಲ್ 6) ಬೆಂಗಳೂರಿನಲ್ಲಿ ಶಿವಣ್ಣ ಸಿನಿಮಾ ನೋಡಿದ್ದಾರೆ. ಯಶ್ ಬಗ್ಗೆ ವಿಶೇಷ ಪ್ರೀತಿ ವ್ಯಕ್ತಪಡಿಸಿದ್ದಾರೆ ಅವರು.

‘ಕೆಜಿಎಫ್ 2’ ಸಿನಿಮಾ ನೋಡಿದ ಅನೇಕರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇಡೀ ಸಿನಿಮಾದಲ್ಲಿ ಯಶ್ ನಟನೆ ಸಾಕಷ್ಟು ಗಮನ ಸೆಳೆಯುತ್ತದೆ. ಹೀಗಾಗಿ, ಯಶ್​ಗೆ ಅನೇಕರು ಫಿದಾ ಆಗಿದ್ದಾರೆ. ಈಗ ನಟ ಶಿವರಾಜ್​ಕುಮಾರ್ ಕೂಡ ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಇಂದು (ಏಪ್ರಿಲ್ 6) ಬೆಂಗಳೂರಿನಲ್ಲಿ ಶಿವಣ್ಣ ಸಿನಿಮಾ ನೋಡಿದ್ದಾರೆ. ಯಶ್ ಬಗ್ಗೆ ವಿಶೇಷ ಪ್ರೀತಿ ವ್ಯಕ್ತಪಡಿಸಿದ್ದಾರೆ ಅವರು. ‘ಯಶ್ ಅವರನ್ನು ಕಂಡರೆ ನನಗೆ ಮೊದಲಿನಿಂದಲೂ ಹೆಚ್ಚು ಪ್ರೀತಿ. ನೀವು ತುಂಬಾ ಸ್ಮಾರ್ಟ್​ ಕಾಣುತ್ತೀರಿ ಎಂದು ಅನೇಕ ಬಾರಿ ಹೇಳಿದ್ದೆ. ಈ ಸಿನಿಮಾದಲ್ಲಿ ಅವರು ಇನ್ನೂ ಸ್ಮಾರ್ಟ್​ ಆಗಿ ಕಾಣುತ್ತಾರೆ. ಸಿನಿಮಾ ಚೆನ್ನಾಗಿದೆ’ ಎಂದಿದ್ದಾರೆ ಶಿವಣ್ಣ. ‘ಕೆಜಿಎಫ್​ 2’ ಸಿನಿಮಾ ಹಿಂದಿಯಲ್ಲಿ 397 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಂದಿನ ಕಲೆಕ್ಷನ್ ಸೇರಿದರೆ ಸಿನಿಮಾ 400 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

Loading...
Unable to load recommendations.
Follow Us