ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವರಾಜ್​ಕುಮಾರ್ ಹೀಗೆ ಹೇಳಿದ್ದು ಏಕೆ?

|

Updated on: Sep 29, 2024 | 8:35 AM

ಶಿವರಾಜ್​ಕುಮಾರ್, ಉಪೇಂದ್ರ ಹಾಗೂ ರಾಜ್​ ಬಿ ಶೆಟ್ಟಿ ನಟನೆಯ, ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ ‘45’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಶಿವಣ್ಣ ಕೆಲವು ಮಾತನ್ನು ಹೇಳಿದ್ದಾರೆ,

ಶಿವರಾಜ್​ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಬಗ್ಗೆ ಮಾಹಿತಿ ನೀಡಲು ತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಯಾರಿಗೆ ಎಷ್ಟು ಸ್ಕ್ರೀನ್​ಸ್ಪೇಸ್ ಎನ್ನುವ ವಿಚಾರ ಬಂತು. ಈ ವೇಳೆ ಮಾತನಾಡಿದ ಶಿವಣ್ಣ, ‘ಯಾರಿಗೆ ಎಷ್ಟು ಪರ್ಸಂಟೇಜ್ ಸಿಕ್ತು ಎಂದು ಲೆಕ್ಕ ಹಾಕ್ತಾ ಕೂರಬಾರದು. ನಾವು ಎಷ್ಟು ಹೊತ್ತು ತೆರೆಮೇಲೆ ಇದ್ದೇವೆ ಅನ್ನೋದಕ್ಕಿಂತ ನಮ್ಮ ಪಾತ್ರ ಎಷ್ಟು ಮುಖ್ಯ ಆಗುತ್ತದೆ ಅನ್ನೋದನ್ನು ನೋಡಬೇಕು’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.