‘ರಾಜಕೀಯಕ್ಕೆ ಏಕೆ ಸ್ಪರ್ಧಿಸಲ್ಲ?’; ನೇರವಾಗಿ ಉತ್ತರಿಸಿದ ಶಿವರಾಜ್ಕುಮಾರ್
ಶಿವರಾಜ್ಕುಮಾರ್ ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಪತಿ ಶಿವರಾಜ್ಕುಮಾರ್ ಕೂಡ ಸಾತ್ ನೀಡುತ್ತಿದ್ದಾರೆ.
ಶಿವರಾಜ್ಕುಮಾರ್ (Shivarajkumar) ಪತ್ನಿ ಗೀತಾ ಶಿವರಾಜ್ಕುಮಾರ್ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ಪತಿ ಶಿವರಾಜ್ಕುಮಾರ್ ಕೂಡ ಸಾತ್ ನೀಡುತ್ತಿದ್ದಾರೆ. ಪತ್ನಿಯ ಜೊತೆ ಹೋಗಿ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ. ಶಿವರಾಜ್ಕುಮಾರ್ ಅವರು ಚುನಾವಣೆಗೆ ಏಕೆ ನಿಲ್ಲುವುದಿಲ್ಲ ಅನ್ನೋದು ಅನೇಕರ ಪ್ರಶ್ನೆ ಇದಕ್ಕೆ ಅವರು ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಪ್ರಚಾರ ಮಾಡುವಾಗ ಉತ್ತರಿಸಿದ್ದಾರೆ. ‘ನನಗೆ ರಾಜಕೀಯ ಗೊತ್ತಿಲ್ಲ. ನಾನು ಅಲ್ಲಿ-ಇಲ್ಲಿ ಸೇವೆ ಮಾಡ್ತೀನಿ. ಗೀತಾ ಅವರ ಬ್ಲಡ್ನಲ್ಲಿ ರಾಜಕೀಯ ಬ್ಲಡ್ ಇದೆ’ ಎಂದಿದ್ದಾರೆ ಶಿವಣ್ಣ. ಶಿವರಾಜ್ಕುಮಾರ್ ಅವರನ್ನು ನೋಡಲು ಅನೇಕರು ನೆರೆದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 28, 2024 12:09 PM
Latest Videos