ಶಿವಣ್ಣನ ಮೊಗದಲ್ಲಿ ಕೊನೆಗೂ ಕಂಡಿತು ನಗು; ವೈರಲ್ ಆಗುತ್ತಿದೆ ವಿಡಿಯೋ
‘ಸಲಗ’ ಸಕ್ಸಸ್ ಮೀಟ್ ಇಂದು (ಫೆಬ್ರವರಿ 4) ನಡೆಯಿತು. ಈ ವೇಳೆ ಶಿವರಾಜ್ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇವರ ಜತೆಗೆ ನಟ ಗಣೇಶ್, ಶ್ರೀನಗರ ಕಿಟ್ಟಿ ಮೊದಲಾದವರು ಕೂಡ ಆಗಮಿಸಿದ್ದರು. ಈ ವೇಳೆ ಶಿವಣ್ಣ ನಗುತ್ತಾ ಮಾತನಾಡುವುದು ಕಂಡು ಬಂತು.
ಪುನೀತ್ ರಾಜ್ಕುಮಾರ್ (Puneeth Rajkumar) ನಿಧನದ ವಿಚಾರದಿಂದ ಶಿವರಾಜ್ಕುಮಾರ್ (Shiva Rajkumar) ವಿಚಲಿತರಾಗಿದ್ದರು. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ಮಾಧ್ಯಮಗಳ ಎದುರು ಪುನೀತ್ ನೆನೆದು ಅವರು ಕಣ್ಣೀರು ಹಾಕಿದ್ದರು. ಪುನೀತ್ ನಿಧನ ಹೊಂದಿ ಮೂರು ತಿಂಗಳ ಮೇಲಾಗಿದೆ. ಪುನೀತ್ ಇಲ್ಲ ಎನ್ನುವ ನೋವನ್ನು ಒಪ್ಪಿಕೊಂಡು ಸಾಗಲೇಬೇಕಾದ ಅನಿವಾರ್ಯತೆ ಇದೆ. ಶಿವರಾಜ್ಕುಮಾರ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ವೇದಿಕೆ ಏರಿದಾಗೆಲ್ಲ ಅವರಿಗೆ ದುಃಖ ಉಮ್ಮಳಿಸಿ ಬರುತ್ತಿತ್ತು. ಈಗ ಅವರ ಮೊಗದಲ್ಲಿ ನಗು ಕಂಡಿದೆ. ‘ಸಲಗ’ ಸಕ್ಸಸ್ ಮೀಟ್ ಇಂದು (ಫೆಬ್ರವರಿ 4) ನಡೆಯಿತು. ಈ ವೇಳೆ ಶಿವರಾಜ್ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇವರ ಜತೆಗೆ ನಟ ಗಣೇಶ್, ಶ್ರೀನಗರ ಕಿಟ್ಟಿ ಮೊದಲಾದವರು ಕೂಡ ಆಗಮಿಸಿದ್ದರು. ಈ ವೇಳೆ ಶಿವಣ್ಣ ನಗುತ್ತಾ ಮಾತನಾಡುವುದು ಕಂಡು ಬಂತು. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಶಿವರಾಜ್ಕುಮಾರ್ ನೋಡೋಕೆ ಮುಗಿಬಿದ್ದ ಅಭಿಮಾನಿಗಳು
Allu Arjun: ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿದ ಅಲ್ಲು ಅರ್ಜುನ್; ಇಲ್ಲಿವೆ ಫೋಟೋಗಳು