‘ಸ್ವಲ್ಪ ನೋವು, ಬೇಜಾರು ಆಯ್ತು’: ‘ಜೇಮ್ಸ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಬಳಿಕ ಶಿವಣ್ಣ ಭಾವುಕ ಮಾತು
‘ಜೇಮ್ಸ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಶಿವರಾಜ್ಕುಮಾರ್ ಭಾವುಕರಾಗಿದ್ದರು. ‘ಅಪ್ಪು ಇಲ್ಲ ಅಂತ ಗೊತ್ತಾದಾಗ ನಮಗೆ ನೋವಾಗುವುದು ಸಹಜ’ ಎಂದು ಶಿವಣ್ಣ ಹೇಳಿದರು.
ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್’ ಸಿನಿಮಾ ನೋಡಲು ಎಲ್ಲರೂ ಕಾಯುತ್ತಿದ್ದಾರೆ. ಮಾ.17ರಂದು ಅದ್ದೂರಿಯಾಗಿ ಈ ಸಿನಿಮಾ ರಿಲೀಸ್ ಆಗಲಿದ್ದು, ಭಾನುವಾರ (ಮಾ.13) ಪ್ರೀ-ರಿಲೀಸ್ ಇವೆಂಟ್ (James Pre-release Event) ನಡೆಯಿತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್ (Shivarajkumar), ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಅನೇಕರು ಭಾಗಿ ಆಗಿದ್ದರು. ಪ್ರೀ-ರಿಲೀಸ್ ಇವೆಂಟ್ ಮುಗಿದ ಬಳಿಕ ಶಿವಣ್ಣ ತಮ್ಮ ಅನಿಸಿಕೆ ಹಂಚಿಕೊಂಡರು. ‘ಅಪ್ಪು ನಟಿಸಿದ ಸಿನಿಮಾಗಳನ್ನು ನೋಡಿದಾಗ, ಅವನ ಮಾತುಗಳನ್ನು ಕೇಳಿದಾಗ ಸ್ವಲ್ಪ ನೋವು, ಬೇಜಾರು ಆಯಿತು. ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ಖುಷಿ ಇದೆ. ಅಪ್ಪು ಇಲ್ಲ ಅಂತ ನಾವು ಅಂದುಕೊಂಡಿಲ್ಲ. ಆದರೆ ಆ ಮನುಷ್ಯ ಇಲ್ಲ ಅಂತ ಗೊತ್ತಾದಾಗ ನಮಗೆ ನೋವಾಗುವುದು ಸಹಜ. ಕಿಶೋರ್ ಅವರು ಸಣ್ಣ ವಯಸ್ಸಿನಲ್ಲಿ ಇಷ್ಟು ದೊಡ್ಡ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಇವತ್ತು ನಾವೆಲ್ಲ ಎಮೋಷನಲ್ ಆಗಿದ್ವಿ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಶಿವಣ್ಣ ಹೇಳಿದರು. ಈ ಸಿನಿಮಾ ನೋಡಲು ಎಲ್ಲರೂ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಎಲ್ಲೆಲ್ಲೂ ಪುನೀತ್ ರಾಜ್ಕುಮಾರ್ ಕಟೌಟ್ಗಳು ರಾರಾಜಿಸುತ್ತಿವೆ.
ಇದನ್ನೂ ಓದಿ:
‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ
ಕೊಪ್ಪಳದಲ್ಲಿ ಪುನೀತ್ ರಾಜ್ಕುಮಾರ್ ಪುತ್ಥಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ಅಭಿಮಾನಿಗಳು