ದೊಡ್ಡ ಬಳ್ಳಾಪುರದಲ್ಲಿ ಡಾ. ರಾಜ್ ಅಭಿಮಾನಿಗಳ ಸಾಗರ: ಪುತ್ಥಳಿ ಅನಾವರಣ ಮಾಡಿದ ಶಿವಣ್ಣ

Updated on: Oct 12, 2025 | 9:17 PM

‘ಹ್ಯಾಟ್ರಿಕ್ ಹೀರೋ’ ಶಿವರಾಜ್​​ಕುಮಾರ್ ಇಂದು (ಅ.12) ದೊಡ್ಡ ಬಳ್ಳಾಪುರಕ್ಕೆ ತೆರಳಿದ್ದಾರೆ. ಡಾ. ರಾಜ್​​ಕುಮಾರ್ ಪುತ್ಥಳಿಯನ್ನು ಅನಾವರಣ ಮಾಡಿದ್ದಾರೆ. ಗೀತಾ ಶಿವರಾಜ್​​ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಅವರನ್ನು ನೋಡಲು ಜನಸಾಗರ ಸೇರಿತ್ತು. ಅಭಿಮಾನಿಗಳನ್ನು ಉದ್ದೇಶಿಸಿ ಶಿವರಾಜ್​​ಕುಮಾರ್ ಮಾತನಾಡಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.

ನಟ ಶಿವರಾಜ್​​ಕುಮಾರ್ ಅವರು ದೊಡ್ಡ ಬಳ್ಳಾಪುರಕ್ಕೆ ತೆರಳಿದ್ದಾರೆ. ಡಾ. ರಾಜ್​​ಕುಮಾರ್ (Dr Rajkumar) ಪುತ್ಥಳಿಯನ್ನು ಇಂದು (ಅಕ್ಟೋಬರ್ 12) ಅನಾವರಣ ಮಾಡಿದ್ದಾರೆ. ಗೀತಾ ಶಿವರಾಜ್​​ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಶಿವರಾಜ್​​ಕುಮಾರ್ ಅವರನ್ನು ನೋಡಲು ಜನಸಾಗರವೇ ಸೇರಿತ್ತು. ಫ್ಯಾನ್ಸ್ ಉದ್ದೇಶಿಸಿ ಶಿವಣ್ಣ ಮಾತನಾಡಿದರು. ದೊಡ್ಡ ಬಳ್ಳಾಪುರದ ಜೊತೆ ತಮಗೆ ಇರುವ ನಂಟಿನ ಬಗ್ಗೆ ಶಿವರಾಜ್​​ಕುಮಾರ್ (Shivarajkumar) ಅವರು ಮಾತಾಡಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ. ಶಿವಣ್ಣ ಅವರನ್ನು ನೋಡಿ ಅಭಿಮಾನಿಗಳು ತುಂಬಾ ಖುಷಿಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More