ಶಿವರಾಜ್ ತಂಗಡಗಿ ಸಚಿವರಾಗಿ ಕ್ಷೇತ್ರಕ್ಕೆ ಬಂದ ಖುಷಿ: ನೀರಿನ ಕ್ಯಾನ್ಗಳಲ್ಲಿ ಎಣ್ಣೆ ವ್ಯವಸ್ಥೆ, ವಿಡಿಯೋ ವೈರಲ್
ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಶಿವರಾಜ ತಂಗಡಗಿ ಬೆಂಬಲಿಗರಿಂದ ಪಾರ್ಟಿ ಆಯೋಜನೆ ಮಾಡಲಾಗಿದ್ದು, ಈ ವೇಳೆ ನೀರಿನ 20 ಲೀಟರ್ ಕ್ಯಾನ್ಗಳಲ್ಲಿ ಮದ್ಯದ ವ್ಯವಸ್ಥೆಯ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೊಪ್ಪಳ: ಮೂರನೇ ಬಾರಿ ನೂತನ ಸಚಿವರಾಗಿ ಶಿವರಾಜ ತಂಗಡಗಿ(Shivaraj Tangadagi) ಮೇ.27 ರಂದು ಪ್ರಮಾಣ ವಚನ ಸ್ವೀಕರಿಸಿದರು. ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ್ದು, ಈ ಹಿನ್ನೆಲೆ ನಿನ್ನೆ(ಮೇ.29) ಸಚಿವರ ಬೆಂಬಲಿಗರು ನೀರಿನ ಕ್ಯಾನ್ಗಳಲ್ಲಿ ಮದ್ಯ ತುಂಬಿ ಸಂಭ್ರಮಿಸಿದ್ದಾರೆ. ಅಲ್ಪ ಉಪಹಾರ ಕಲ್ಪಿಸುವ ನೆಪದಲ್ಲಿ 20 ಲೀ ಕ್ಯಾನ್ಗಳಲ್ಲಿ ಮದ್ಯದ ವ್ಯವಸ್ಥೆಯನ್ನ ತಂಗಡಗಿ ಬೆಂಬಲಿಗರು ಮಾಡಿದ್ದಾರೆ. ಮದ್ಯ ತುಂಬಿದ ನೀರಿನ ಕ್ಯಾನ್ ಗಳ ವಿಡಿಯೋ ಇದೀಗ ಫುಲ್ ವೈರಲ್ ಆಗಿದ್ದು ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ