T Narasipura Accident: ನಿನ್ನೆ ಭೀಕರ ಅಪಘಾತಕ್ಕೆ ಬಲಿಯಾದ 9 ಜನರ ಸ್ವಗ್ರಾಮದಲ್ಲಿ ಇಂದು ಒಂದೇ ಕಡೆ ಅಂತ್ಯಕ್ರಿಯೆ

T Narasipura Accident: ನಿನ್ನೆ ಭೀಕರ ಅಪಘಾತಕ್ಕೆ ಬಲಿಯಾದ 9 ಜನರ ಸ್ವಗ್ರಾಮದಲ್ಲಿ ಇಂದು ಒಂದೇ ಕಡೆ ಅಂತ್ಯಕ್ರಿಯೆ

ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:May 30, 2023 | 5:31 PM

ಮೃತರ ಪಾರ್ಥೀವ ಶರೀರಗಳನ್ನು ಮೈಸೂರುನಿಂದ ಸಂಗನಕಲ್ಲಿಗೆ ತರಲಾಗುತ್ತಿದ್ದು ಬೆಳಗ್ಗೆ 11.30ರ ಹೊತ್ತಿಗೆ ತಲುಪಬಹುದೆಂದು ಸಂಬಂಧಿಕರೊಬ್ಬರು ಹೇಳುತ್ತಾರೆ.

ಬಳ್ಳಾರಿ: ಮೈಸೂರಿನ ಟಿ ನರಸೀಪುರದ ಬಳಿ ನಿನ್ನೆ ಜರುಗಿದ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವಿಗೀಡಾದ ಒಂದೇ ಕುಟುಂಬ 9 ಜನರ ಅಂತ್ಯಕ್ರಿಯೆ (Final rites) ಅವರ ಸ್ವಗ್ರಾಮ ಜಿಲ್ಲೆಯ ಸಂಗನಕಲ್ಲುನಲ್ಲಿ (Sanganakallu) ನಡೆಸಲು ಸಿದ್ಧತೆಗಳಿ ನಡೆದಿವೆ. ಬಳ್ಳಾರಿಯ ಟಿವಿ9 ಕನ್ನಡ ವರದಿಗಾರ ಹೇಳುವ ಪ್ರಕಾರ ಎಲ್ಲ 9 ಜನರ ಅಂತ್ಯಕ್ರಿಯೆ ಒಂದೇ ಜಾಗದಲ್ಲಿ ನಡೆಯಲಿದೆ. ಬಳ್ಳಾರಿ ಜಿಲ್ಲಾಡಳಿತ (district administration) ಶವಗಳ ಅಂತಿಮ ಸಂಸ್ಕಾರಕ್ಕೆ ಸಿದ್ಧತೆಗಳನ್ನು ಮಾಡುತ್ತಿದೆ. ಮೃತರ ಪಾರ್ಥೀವ ಶರೀರಗಳನ್ನು ಮೈಸೂರುನಿಂದ ಸಂಗನಕಲ್ಲಿಗೆ ತರಲಾಗುತ್ತಿದ್ದು ಬೆಳಗ್ಗೆ 11.30ರ ಹೊತ್ತಿಗೆ ತಲುಪಬಹುದೆಂದು ಸಂಬಂಧಿಕರೊಬ್ಬರು ಹೇಳುತ್ತಾರೆ. ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ತಲಾ ರೂ. 2 ಲಕ್ಷ ಘೋಷಿಸಿದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬದ ಹತ್ತಿರದ ಸಂಬಂಧಿಕರಿಗೆ ರೂ. ಎರಡೆರಡು ಲಕ್ಷ ಪರಿಹಾರ ಧನದ ಘೋಷಣೆ ಮಾಡಿದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 30, 2023 11:14 AM