Shivaraj Tangadigi: ಸಚಿವರಾದ ಬಳಿಕ ಕನಕಗಿರಿಗೆ ಆಗಮಿಸಿದ ಶಿವರಾಜ ತಂಗಡಗಿಯನ್ನು ಬೆಂಬಲಿಗರು ಮದ್ಯದ ಕ್ಯಾನ್ಗಳೊಂದಿಗೆ ಸ್ವಾಗತಿಸಿದರು!
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳೇ, ಜನ ಬಯಸಿದ ಬದಲಾವಣೆ ಖಂಡಿತ ಇದಲ್ಲ.
ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivaraj Kumar) ನೋಡಲೇಬೇಕಾದ ವಿಡಿಯೋ ಇದು. ಶಿವರಾಜ ತಂಗಡಗಿ (Shivaraj Tangadigi) ಸಚಿವರಾದ ಮೇಲೆ ಮೊದಲ ಬಾರಿಗೆ ತಮ್ಮ ಕ್ಷೇತ್ರ ಕನಕಗಿರಿಗೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಅಭಿಮಾನಿಗಳು ಮಾಡಿಕೊಂಡ ಸಿದ್ಧತೆಗಳ ದೃಶ್ಯವಿದು. ನೀರಿನ ಕ್ಯಾನ್ ಗಳಲ್ಲಿ ಮದ್ಯ ತುಂಬಿಸಿ ಸರಬರಾಜು ಮಾಡಲಾಗಿದೆ. ಮದ್ಯದ ಕ್ಯಾನಲ್ಲಿ ಯಾವುದೋ ಪುಡಿಯನ್ನು ಸಹ ಬೆರಸಲಾಗುತ್ತಿದೆ. ಜನ ಈ ಕಾರಣಕ್ಕೆ ತಂಗಡಗಿ ವೋಟು ನೀಡಿ ಗೆಲ್ಲಿಸಿದರೆ? ಅವರನ್ನು ಮಂತ್ರಿಮಾಡಲು ಈ ಮಾನದಂಡವನ್ನು ಅನುಸರಿಸಲಾಯಿತೆ? ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳೇ, ಜನ ಬಯಸಿದ ಬದಲಾವಣೆ ಖಂಡಿತ ಇದಲ್ಲ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos