ಹಾಸನದಲ್ಲೊಂದು ಆಘಾತಕಾರಿ ಘಟನೆ: ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆಗೆ ಬಂದ ಆಗಂತುಕ
ಹಾಸನ ನಗರದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಅಪರಿಚಿತ ವ್ಯಕ್ತಿಯೋರ್ವ ಶಾಲಾ ಬಾಲಕಿ ಹಿಂಬಾಲಿಸಿ ಆಕೆಯ ಮನೆ ಬಾಗಿಲುವರೆಗೂ ಬಂದಿದ್ದು, ಆತಂಕ ಸೃಷ್ಟಿಸಿದೆ. ತನ್ನನ್ನ ಯಾರೋ ಹಿಂಬಾಲಿಸುತ್ತಿದ್ದಾರೆಂದು ತಿಳಿದು ಬಾಲಕಿ ಮನೆ ಕಡೆಗೆ ಓಡೋಡಿ ಬಂದಿದ್ದು, ಗೇಟು ಹಾಕಿಕೊಂಡು ಅಮ್ಮ ಅಮ್ಮ ಬಾಗಿಲು ತೆಗಿ ಎಂದು ಆತಂಕದಿಂದ ಕಿರಿಚಿದ್ದಾಳೆ. ಇನ್ನೊಂದೆಡೆ ಆಗಂತುಕ ಸಹ ಬಾಲಕಿಯನ್ನ ಬೆನ್ನಟ್ಟಿ ಮನೆ ಗೇಟ್ ವರೆಗೂ ಬಂದಿದ್ದಾನೆ. ಈ ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ನೋಡಿದರೆ ಬೆಚ್ಚಿಬೀಳಿಸುವಂತಿದೆ.
ಹಾಸನ, (ಜನವರಿ 20): ಹಾಸನ (Hassan) ನಗರದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಅಪರಿಚಿತ ವ್ಯಕ್ತಿಯೋರ್ವ ಶಾಲಾ ಬಾಲಕಿ ಹಿಂಬಾಲಿಸಿ ಆಕೆಯ ಮನೆ ಬಾಗಿಲುವರೆಗೂ ಬಂದಿದ್ದು, ಆತಂಕ ಸೃಷ್ಟಿಸಿದೆ. ತನ್ನನ್ನ ಯಾರೋ ಹಿಂಬಾಲಿಸುತ್ತಿದ್ದಾರೆಂದು ತಿಳಿದು ಬಾಲಕಿ ಮನೆ ಕಡೆಗೆ ಓಡೋಡಿ ಬಂದಿದ್ದು, ಗೇಟು ಹಾಕಿಕೊಂಡು ಅಮ್ಮ ಅಮ್ಮ ಬಾಗಿಲು ತೆಗಿ ಎಂದು ಆತಂಕದಿಂದ ಕಿರಿಚಿದ್ದಾಳೆ. ಇನ್ನೊಂದೆಡೆ ಆಗಂತುಕ ಸಹ ಬಾಲಕಿಯನ್ನ ಬೆನ್ನಟ್ಟಿ ಮನೆ ಗೇಟ್ ವರೆಗೂ ಬಂದಿದ್ದಾನೆ. ಈ ಬೆಚ್ಚಿಬೀಳಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ನೋಡಿದರೆ ಬೆಚ್ಚಿಬೀಳಿಸುವಂತಿದೆ. ಜನವರಿ 17ರ ಶನಿವಾರ ಮಧ್ಯಾಹ್ನ ಹಾಸನದ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆಗಂತುಕನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

