ಇಡುಕ್ಕಿ ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್

ಇಡುಕ್ಕಿ ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವ್

ಸುಷ್ಮಾ ಚಕ್ರೆ
|

Updated on: Dec 02, 2024 | 9:08 PM

ಕೇರಳದ ಇಡುಕ್ಕಿ ಬಸ್ ಡಿಪೋದಲ್ಲಿ ಯುವಕನಿಗೆ ಬಸ್ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ಕೂದಲೆಳೆ ಅಂತರದಿಂದ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇಡುಕ್ಕಿ: ಕೇರಳದ ಇಡುಕ್ಕಿಯ ಕಟ್ಟಪ್ಪನ ಹೊಸ ಬಸ್ ಟರ್ಮಿನಲ್‌ನಲ್ಲಿ ಬೆಂಚ್ ಮೇಲೆ ಕುಳಿತಿದ್ದ ಯುವಕನಿಗೆ ಇಂದು ನಿಯಂತ್ರಣ ತಪ್ಪಿದ ಬಸ್ ಡಿಕ್ಕಿ ಹೊಡೆದಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇಡುಕ್ಕಿಯ ಕುಮಿಲಿ ನಿವಾಸಿ ವಿಷ್ಣು ಡಿಪೋದಲ್ಲಿ ಬೆಂಚ್ ಮೇಲೆ ಕುಳಿತಿದ್ದಾಗ ಈ ಘಟನೆ ಸಂಭವಿಸಿದೆ. ಮುನ್ನಾರ್-ಕಟ್ಟಪ್ಪನ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿಯಾಮೋಲ್ ಎಂಬ ಹೆಸರಿನ ಖಾಸಗಿ ಬಸ್ ಸಮೀಪ ನಿಲ್ಲಿಸಲು ಯತ್ನಿಸುತ್ತಿದ್ದಾಗ ಅನಿರೀಕ್ಷಿತವಾಗಿ ಮುಂದಕ್ಕೆ ನುಗ್ಗಿತು. ಗೇರ್ ಹಾಳಾಗಿ ಬಸ್ ನಿಯಂತ್ರಣ ತಪ್ಪಿ, ವಿಷ್ಣು ಕುಳಿತಿದ್ದ ಸ್ಥಳಕ್ಕೆ ಅಪ್ಪಳಿಸಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ