ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಹೈದರಾಬಾದ್ನ ರಸ್ತೆಯಲ್ಲಿ ದೊಡ್ಡ ಹೆಬ್ಬಾವು ಕಾಣಿಸಿಕೊಂಡಿದ್ದು ಆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿತು. ಪ್ರಯಾಣಿಕರು ಭಯಭೀತರಾಗಿದ್ದಾಗ ಸಂಚಾರ ನಿಯಂತ್ರಣದ ಉಸ್ತುವಾರಿ ವಹಿಸಿದ್ದ ಮಲಕ್‌ಪೇಟೆ ಟ್ರಾಫಿಕ್ ಕಾನ್ಸ್‌ಟೇಬಲ್ ವೆಂಕಟೇಶ್ ನಾಯಕ್ ಅವರು ಹಾವನ್ನು ಹಿಡಿದು, ಗೋಣಿಚೀಲದಲ್ಲಿ ತುಂಬಿದರು. ಹಾವನ್ನು ಸುರಕ್ಷಿತವಾಗಿ ಹಿಡಿದು ಅಲ್ಲಿದ್ದ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಹಾವಿಗೆ ಯಾವುದೇ ಗಾಯವಾಗದಂತೆ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಿದ ವೆಂಕಟೇಶ್ ನಾಯಕ್ ಅವರ ಧೈರ್ಯಕ್ಕಾಗಿ ಸ್ಥಳೀಯರು ಅವರನ್ನು ಶ್ಲಾಘಿಸುತ್ತಿದ್ದಾರೆ.
ಹೈದರಾಬಾದ್, ಅಕ್ಟೋಬರ್ 8: ಹೈದರಾಬಾದ್ನ ರಸ್ತೆಯಲ್ಲಿ ದೊಡ್ಡ ಹೆಬ್ಬಾವು ಕಾಣಿಸಿಕೊಂಡಿದ್ದು ಆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿತು. ಪ್ರಯಾಣಿಕರು ಭಯಭೀತರಾಗಿದ್ದಾಗ ಸಂಚಾರ ನಿಯಂತ್ರಣದ ಉಸ್ತುವಾರಿ ವಹಿಸಿದ್ದ ಮಲಕ್‌ಪೇಟೆ ಟ್ರಾಫಿಕ್ ಕಾನ್ಸ್‌ಟೇಬಲ್ ವೆಂಕಟೇಶ್ ನಾಯಕ್ ಅವರು ಹಾವನ್ನು ಹಿಡಿದು, ಗೋಣಿಚೀಲದಲ್ಲಿ ತುಂಬಿದರು. ಹಾವನ್ನು ಸುರಕ್ಷಿತವಾಗಿ ಹಿಡಿದು ಅಲ್ಲಿದ್ದ ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಹಾವಿಗೆ ಯಾವುದೇ ಗಾಯವಾಗದಂತೆ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಿದ ವೆಂಕಟೇಶ್ ನಾಯಕ್ ಅವರ ಧೈರ್ಯಕ್ಕಾಗಿ ಸ್ಥಳೀಯರು ಅವರನ್ನು ಶ್ಲಾಘಿಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ