Video: ಮುಂಬೈ: ಎಂಎಲ್ಎ ಗೆಸ್ಟ್ಹೌಸ್ ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್ವಾಡ್(Sanjay Gaikwad), ಮುಂಬೈನ ಎಂಎಲ್ಎ ಗೆಸ್ಟ್ಹೌಸ್ನಲ್ಲಿರುವ ಕ್ಯಾಂಟೀನ್ನ ನಿರ್ವಾಹಕರನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಸಕ ಸಂಜಯ್ಗೆ ನೀಡಿರುವ ದಾಲ್ ಚೆನ್ನಾಗಿಲ್ಲವೆಂದು ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ್ದಾರೆ ಎನ್ನಲಾಗಿದೆ. ಪದಾರ್ಥಕ್ಕೆ ಹಾಕಿದ್ದ ಬೇಳೆಗಳಿಂದ ವಾಸನೆ ಬರುತ್ತಿತ್ತು ಎಂದು ಶಾಸಕರು ಆರೋಪಿಸಿದ್ದಾರೆ.ಇದರಿಂದ ಕೋಪಗೊಂಡ ಅವರು ಕ್ಯಾಂಟೀನ್ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಪುಣೆ, ಜುಲೈ 09: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್ವಾಡ್(Sanjay Gaikwad), ಮುಂಬೈನ ಎಂಎಲ್ಎ ಗೆಸ್ಟ್ಹೌಸ್ನಲ್ಲಿರುವ ಕ್ಯಾಂಟೀನ್ನ ನಿರ್ವಾಹಕರನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಸಕ ಸಂಜಯ್ಗೆ ನೀಡಿರುವ ದಾಲ್ ಚೆನ್ನಾಗಿಲ್ಲವೆಂದು ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ್ದಾರೆ ಎನ್ನಲಾಗಿದೆ. ಪದಾರ್ಥಕ್ಕೆ ಹಾಕಿದ್ದ ಬೇಳೆಗಳಿಂದ ವಾಸನೆ ಬರುತ್ತಿತ್ತು ಎಂದು ಶಾಸಕರು ಆರೋಪಿಸಿದ್ದಾರೆ. ಇದರಿಂದ ಕೋಪಗೊಂಡ ಅವರು ಕ್ಯಾಂಟೀನ್ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಶಾಸಕರ ಬಳಿ ಜಗಳವಾಡದಂತೆ ಮನವೊಲಿಸಲು ಹಲವರು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿರುವುದರಿಂದ ಎಲ್ಲಾ ಶಾಸಕರು ಮುಂಬೈಗೆ ಬಂದಿದ್ದಾರೆ.
ಬುಲ್ದಾನದ ಶಾಸಕ ಸಂಜಯ್ ಗಾಯಕ್ವಾಡ್ ಕೂಡ ಶಾಸಕರ ವಸತಿಗೃಹಕ್ಕೆ ಹೋಗಿ, ಅಲ್ಲಿನ ಕ್ಯಾಂಟೀನ್ನಲ್ಲಿ ಆಹಾರವನ್ನು ಆರ್ಡರ್ ಮಾಡಿದ್ದರು. ಈ ಸಮಯದಲ್ಲಿ ಅನೇಕ ಮಂದಿ ದಾಲ್ ಕೆಟ್ಟದಾಗಿದೆ ಮತ್ತು ಅದರಿಂದ ದುರ್ವಾಸನೆ ಬೀರುತ್ತಿದೆ ಎಂದು ದೂರಿದ್ದರು. ದೂರು ನೀಡಿದ ನಂತರವೂ ಕ್ಯಾಂಟೀನ್ ನಿರ್ವಾಹಕ ಅದರ ಬಗ್ಗೆ ಹೆಚ್ಚು ಗಮನಕೊಡಲಿಲ್ಲ ಎಂದು ಆರೋಪಿಸಲಾಗಿದೆ.
ಆದರೆ ಅದೇ ದಾಲ್ ಅನ್ನು ಶಾಸಕ ಗಾಯಕ್ವಾಡ್ ಅವರಿಗೆ ಬಡಿಸಿದಾಗ, ಅವರು ಕ್ಯಾಂಟೀನ್ ನಿರ್ವಾಹಕರ ಬಳಿಗೆ ಹೋಗಿ ಆಹಾರ ಸರಿಯಾಗಿಲ್ಲ ಎಂದು ಹೇಳಿ ಅವರ ಕೆನ್ನೆಗೆ ಬಾರಿಸಿದ್ದಾರೆ. ಈ ಹೊಡೆದಾಟದ ವಿಡಿಯೋ ವೈರಲ್ ಆಗುತ್ತಿದೆ. ಈ ವಿಷಯದ ಬಗ್ಗೆ ಆಹಾರ ಮತ್ತು ಆಡಳಿತ ಇಲಾಖೆಯಲ್ಲಿ ಕ್ಯಾಂಟೀನ್ ನಿರ್ವಾಹಕರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಶಾಸಕರು ಹೇಳಿದ್ದಾರೆ.
ಇದಕ್ಕೂ ಮೊದಲು, ಮರಾಠಿ ವಿವಾದದ ಕುರಿತು ಸಂಜಯ್ ಗಾಯಕ್ವಾಡ್ ಅವರು, ಛತ್ರಪತಿ ಸಂಭಾಜಿ ಮಹಾರಾಜ್ 16 ಭಾಷೆಗಳನ್ನು ಕಲಿತಿದ್ದಾರೆ ಎಂದರೆ ಅವರು ಮೂರ್ಖರೇ? ತಾರಾಬಾಯಿ ಮತ್ತು ಜೀಜಾಬಾಯಿ ಕೂಡ ಹಿಂದಿ ಸೇರಿದಂತೆ ಹಲವು ಭಾಷೆಗಳನ್ನು ಕಲಿತಿದ್ದರು. ಅವರೆಲ್ಲರೂ ಮೂರ್ಖರೇ? ನಾವು ಸಾಧ್ಯವಾದಷ್ಟು ಭಾಷೆಗಳನ್ನು ಕಲಿಯಬೇಕು. ಗಾಯಕ್ವಾಡ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದರೂ, ಈಗ ಮತ್ತೊಂದು ವಿವಾದ ಹುಟ್ಟಿಕೊಂಡಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ