ಥಿಯೇಟರ್ ಮುಂದೆ ‘ಶೋಕಿವಾಲ’ ನಟಿ ಸಂಜನಾ ಆನಂದ್ ಬಿಂದಾಸ್ ಡ್ಯಾನ್ಸ್; ಇಲ್ಲಿದೆ ವಿಡಿಯೋ
ನಟಿ ಸಂಜನಾ ಆನಂದ್ ಅವರು ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಡೊಳ್ಳಿನ ಸದ್ದಿಗೆ ಅವರು ನಟ ಗಿರಿ ಜೊತೆ ಕುಣಿದಿದ್ದಾರೆ.
ನಟಿ ಸಂಜನಾ ಆನಂದ್ (Sanjana Anand) ಅವರು ಸ್ಯಾಂಡಲ್ವುಡ್ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ‘ಸಲಗ’ ಸಿನಿಮಾ ಮೂಲಕ ಅವರು ಭರ್ಜರಿ ಗೆಲುವು ಕಂಡರು. ಈ ವಾರ (ಏ.29) ಸಂಜನಾ ಆನಂದ್ ಮತ್ತು ಅಜಯ್ ರಾವ್ (Krishna Ajay Rao) ಜೋಡಿಯಾಗಿ ನಟಿಸಿರುವ ‘ಶೋಕಿವಾಲ’ ಸಿನಿಮಾ ರಿಲೀಸ್ ಆಗಿದೆ. ಪ್ರತಿ ಶುಕ್ರವಾರ ಹೊಸ ಚಿತ್ರ ಬಿಡುಗಡೆ ಆಗುವಾಗ ಥಿಯೇಟರ್ ಎದುರು ಹಬ್ಬದ ವಾತಾವರಣ ನಿರ್ಮಾಣ ಆಗಿರುತ್ತದೆ. ಅಭಿಮಾನಿಗಳು ಕುಣಿದು ಕುಪ್ಪಳಿಸುವುದು ಸಹಜ. ಆದರೆ ಇಂದು ಸ್ವತಃ ಸಂಜನಾ ಆನಂದ್ ಅವರು ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ಡೊಳ್ಳಿನ ಸದ್ದಿಗೆ ಅವರು ನಟ ಗಿರಿ ಜೊತೆ ಕುಣಿದಿದ್ದಾರೆ. ‘ಶೋಕಿವಾಲ’ (Shokiwala Movie) ಸಿನಿಮಾಗೆ ಜಾಕಿ (ತಿಮ್ಮೇಗೌಡ) ನಿರ್ದೇಶನ ಮಾಡಿದ್ದಾರೆ. ಟಿ.ಆರ್. ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ:
ಸಲಗಕ್ಕೆ ಫ್ಯಾನ್ಸ್ ಜೈಕಾರ; ಫಸ್ಟ್ ಡೇ ಫಸ್ಟ್ ಶೋ ನೋಡಿದ ಅಭಿಮಾನಿಗಳು ಏನ್ ಹೇಳಿದ್ರು?
‘ಕೆಜಿಎಫ್ 2’ ಹಿಟ್ ಆಗಿದ್ದಕ್ಕೆ ಕಬ್ಬಿನ ಹಾಲು ಟ್ರೀಟ್ ಕೇಳಿದ ‘ಗೂಗ್ಲಿ’ ನಟಿ ಕೃತಿ ಕರಬಂಧ: ಯಶ್ ಏನಂದ್ರು?