ಚಿರಂಜೀವಿ, ರಾಮ್​ ಚರಣ್​ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿದ ಫ್ಯಾನ್ಸ್​; ಪವನ್​ ಕಲ್ಯಾಣ್​ಗೂ ಜೈಕಾರ

ಮೆಗಾ ಸ್ಟಾರ್​ ಚಿರಂಜೀವಿ ಮತ್ತು ರಾಮ್​ ಚರಣ್​ ಅಭಿನಯದ ‘ಆಚಾರ್ಯ’ ಸಿನಿಮಾವನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಕರ್ನಾಟಕದ ಹಲವೆಡೆ ಈ ಚಿತ್ರಕ್ಕೆ ಉತ್ತಮ ಓಪನಿಂಗ್​ ಸಿಕ್ಕಿದೆ.

TV9kannada Web Team

| Edited By: Madan Kumar

Apr 29, 2022 | 2:37 PM

ಟಾಲಿವುಡ್​ನ ‘ಆಚಾರ್ಯ’ ಸಿನಿಮಾ (Acharya Movie) ಇಂದು (ಏ.29) ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ‘ಮೆಗಾ ಸ್ಟಾರ್​’ ಚಿರಂಜೀವಿ (Mega Star Chiranjeevi) ನಟನೆಯ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳು ಈ ಚಿತ್ರದ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಪ್ರೇಕ್ಷಕರಿಂದ ‘ಆಚಾರ್ಯ’ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಾಗಿದ್ದರೂ ಕೂಡ ಮೊದಲ ದಿನ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿದೆ. ಕರ್ನಾಟಕದಲ್ಲಿಯೂ ಚಿರಂಜೀವಿ ಅವರಿಗೆ ಅಭಿಮಾನಿಗಳು ಇದ್ದಾರೆ. ಇಲ್ಲಿನ ಹಲವು ಚಿತ್ರಮಂದಿರಗಳ ಎದುರು ಚಿರಂಜೀವಿ ಹಾಗೂ ರಾಮ್​ ಚರಣ್​ (Ram Charan) ಅವರ ಕಟೌಟ್​ ನಿಲ್ಲಿಸಲಾಗಿದ್ದು, ಹಾಲಿನ ಅಭಿಷೇಕ ಮಾಡಲಾಗಿದೆ. ಜೊತೆಗೆ ‘ಮೆಗಾ’ ಫ್ಯಾಮಿಲಿಯ ಹೀರೋ ಪವನ್​ ಕಲ್ಯಾಣ್​ ಅವರಿಗೂ ಅಭಿಮಾನಿಗಳು ಜೈಕಾರ ಕೂಗಿದ್ದಾರೆ.

ಇದನ್ನೂ ಓದಿ:

Acharya Movie Review: ಹಳಿ ತಪ್ಪಿದ ‘ಆಚಾರ್ಯ’ನ ಪಾಠ

‘ಹಿಂದಿಯಲ್ಲಿ ‘ಆಚಾರ್ಯ’ ರಿಲೀಸ್​ ಮಾಡಲ್ಲ, ಬೇಸರವೂ ಇಲ್ಲ’: ನಿರ್ಧಾರಕ್ಕೆ ಕಾರಣ ತಿಳಿಸಿದ ರಾಮ್​ ಚರಣ್​

Follow us on

Click on your DTH Provider to Add TV9 Kannada