ಹಾಸ್ಟೆಲೊಂದಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಅಹವಾಲನ್ನು ಆಲಿಸಿದ ಸುರಪುರ ಶಾಸಕ ವೇಣುಗೋಪಾಲ್ ನಾಯಕ್

ಅರುಣ್​ ಕುಮಾರ್​ ಬೆಳ್ಳಿ

Updated on: Jan 29, 2025 | 10:37 AM

ಹಾಸ್ಟೆಲ್​ನಲ್ಲಿ ಪ್ರತಿದಿನ ಮಕ್ಕಳಿಗೆ ನೀಡುವ ಆಹಾರವನ್ನೇ ವಾರ್ಡನ್​ಗಳಿಗೆ ಉಣಬಡಿಸುವ ನಿಯಮವನ್ನು ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಎಸ್ಸಿ ಎಸ್ಟಿ ಕಲ್ಯಾಣ ಇಲಾಖೆಗಳು ಕಡ್ಡಾಯಗೊಳಿಸಬೇಕು. ಇಲ್ಲದಿದ್ದರೆ, ಶಾಸಕರು ಮತ್ತು ಉಪ ಲೋಕಾಯುಕ್ತರು ಭೇಟಿ ನೀಡಿದ ಒಂದೆರಡು ದಿನಗಳ ಕಾಲ ವಾರ್ಡನ್ ಗಳು ಉತ್ತಮ ಆಹಾರವನ್ನು ನೀಡಿ ಪುನಃ ತಮ್ಮ ಹಳೆಯ ಚಾಳಿಗೆ ವಾಪಸ್ಸಾಗುತ್ತಾರೆ.

ಯಾದಗಿರಿ: ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ್ ಇಂದು ಪಟ್ಟಣದ ಮೆಟ್ರಿಕ್ ನಂತರದ ಹಾಸ್ಟೆಲ್ ಒಂದಕ್ಕೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಯನ್ನು ವೀಕ್ಷಿಸಿದರು. ಭೇಟಿಯ ವೇಳೆ ಹಾಸ್ಟೆಲ್​ನ ಎಲ್ಲ ಕೋಣೆ ಮತ್ತು ಅಡುಗೆ ಮನೆಯನ್ನು ಪರಿಶೀಲಿಸಿದ ಶಾಸಕ ವಿದ್ಯಾರ್ಥಿಗಳ ಅಹವಾಲುಗಳನ್ನು ಕೇಳಿದರು. ಮೆನು ಪ್ರಕಾರ ವಿದ್ಯಾರ್ಥಿಗಳಿಗೆ ಊಟ ನೀಡದಿರುವ ವಿಷಯ ಗೊತ್ತಾದ ಬಳಿಕ ಹಾಸ್ಟೆಲ್ ವಾರ್ಡನ್ ಮೇಲೆ ರೇಗಿದರು. ವಾರ್ಡನ್ ಗಳು ಸಾಮಾನ್ಯವಾಗಿ ಉಡಾಫೆ ನೀಡುವುದರಲ್ಲಿ ಪರಿಣಿತರು. ಇಲ್ಲಿಯ ವಾರ್ಡನ್ ಸಹ ಅದೇ ವರಸೆ ಪ್ರದರ್ಶಿಸಿದಾಗ ಶಾಸಕ ತರಾಟೆಗೆ ತೆಗೆದುಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಳ್ಳಾರಿ ಎಸ್ಸಿ ಮತ್ತು ಎಸ್ಟಿ ಹಾಸ್ಟೆಲ್ ದುರವಸ್ಥೆ ಕಂಡು ವಾರ್ಡನ್​ನನ್ನು ಮಕ್ಕಳೆದುರೇ ಜರಿದ ಉಪಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.