ಶ್ರಾವಣ ಮಾಸದ ಕೊನೆಯ ಶುಕ್ರವಾರದ ಹಿನ್ನೆಲೆ ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಶ್ರಾವಣ ಮಾಸದ ಕೊನೆಯ ಶುಕ್ರವಾರ ಹಾಗೂ ಅಮಾವಾಸ್ಯೆ ಹಿನ್ನೆಲೆ ಕೋಲಾರದ ನಗರದೇವತೆ ಕೋಲಾರಮ್ಮ ದೇವಿಗೆ ತಿರುವನಂತಪುರಂನಿಂದ ತರಿಸಲಾದ 10,108 ತಾವರೆ ಹೂವುಗಳಿಂದ ವಿಶೇಷ ಅಲಂಕಾರ ನೆರವೇರಿಸಲಾಗಿದ್ದು, ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ದೇವಾಲಯವೂ ಕೂಡ ಹೂಗಳ ಅಲಂಕಾರದಿಂದ ಕಂಗೊಳಿಸಿದೆ.
ಕೋಲಾರ, ಸೆಪ್ಟೆಂಬರ್ 11: ಶ್ರಾವಣ ಮಾಸದ ಕೊನೆಯ ಶುಕ್ರವಾರ ಹಾಗೂ ಅಮಾವಾಸ್ಯೆ ಹಿನ್ನಲೆ ಕೋಲಾರದ ನಗರದೇವತೆ ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆದಿವೆ. ದೇವಿಗೆ 10,108 ತಾವರೆ ಹೂವಿನ ಅಲಂಕಾರ ಮಾಡಲಾಗಿದ್ದು, ದೇವಾಲಯವನ್ನೂ ಹೂವುಗಳಿಂದ ಅಲಂಕರಿಸಲಾಗಿದೆ. ಅಲಂಕಾರಕ್ಕಾಗಿ ತಾವರೆ ಹೂವುಗಳನ್ನು ತಿರುವನಂತಪುರಂನಿಂದ ತರಲಾಗಿದ್ದು, ಬೆಳಿಗ್ಗಿನಿಂದಲೇ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 11, 2026 11:58 AM
Follow Us
Latest Videos

