ನಾನು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಬೇಕಾದರೆ ಶ್ರೇಯಸ್ ಪಟೇಲ್​ರನ್ನು ಗೆಲ್ಲಿಸಬೇಕು: ಕೆಎಂ ಶಿವಲಿಂಗೇಗೌಡ

ನಾನು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಬೇಕಾದರೆ ಶ್ರೇಯಸ್ ಪಟೇಲ್​ರನ್ನು ಗೆಲ್ಲಿಸಬೇಕು: ಕೆಎಂ ಶಿವಲಿಂಗೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 08, 2024 | 7:18 PM

ಆದರೆ ಹೌಸಿಂಗ್ ಬೋರ್ಡ್ ಅಧ್ಯಕ್ಷನ ತಾನು ತಿರಸ್ಕರಿಸುವುದಾಗಿ ಹೇಳಿದ ಗೌಡರು ತನ್ನನ್ನು ಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕಾದರೆ ಶ್ರೇಯಸ್ ಪಟೇಲ್ ರನ್ನು ಪ್ರಚಂಡ ಬಹಮತದಿಂದ ಗೆಲ್ಲಿಸಬೇಕು, ಗೆಲ್ಲಿಸಿದರೆ ತಾನು ಖಂಡಿತ ಮಂತ್ರಿ ಆಗುವೆ ಮತ್ತು ಮುಂದಿನ ನಾಲ್ಕು ವರ್ಷಗಳ ಕಾಲ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಹೇಳಿದರು.

ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್-ಎರಡೂ ಪಕ್ಷಗಳ ಚುನಾವಣಾ ಪ್ರಚಾರ ಭರ್ಜರಿಯಾಗಿ ನಡೆದಿದೆ. ಚನ್ನರಾಯಪಟ್ಟಣದಲ್ಲಿ ಆಯೋಜಿಸಿದ ಕಾಂಗ್ರೆಸ್ ಸಮಾವೇಶದಲ್ಲಿ (Congress convention) ಮಾತಾಡಿದ ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ (KM Shivalinge Gowda) ಅವರು ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ (Shreyas Patel) ಪರ ಪ್ರಚಾರ ಮಾಡುವುದರ ಜೊತೆಗೆ ತಮ್ಮನ್ನ ಮಂತ್ರಿ ಮಾಡಬೇಕೆನ್ನುವ ಆಗ್ರಹವನ್ನು ಬಹಳ ಚಾಕ್ಯಚಕ್ಯತೆಯಿಂದ ಮಾಡಿದರು. ಮಾತು ಆರಂಭಿಸಿದ ಬಳಿಕ ಬರಪರಿಹಾರ ನಿಧಿ ಮಾಡದಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದದ ಗೌಡರು, ನಂತರ ತಾವು ಮಂತ್ರಿಯಾಗುವ ಇಂಗಿತವನ್ನು ಗಟ್ಟಿಧ್ವನಿಯಲ್ಲಿ ಹೇಳಿದರು. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿಯೂ ತಾನು ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದಿರುವುದಾಗಿ ಹೇಳಿದ ಅವರು ಗೆದ್ದ ಬಳಿಕ ತನ್ನನ್ನು ಮಂತ್ರಿ ಮಾಡಬೇಕಿತ್ತು, ಆದರೆ ಅದ್ಯಾವುದೋ ಕಾರಣಕ್ಕೆ ಸಚಿವ ಸ್ಥಾನ ನೀಡದೆ ಹೌಸಿಂಗ್ ಬೋರ್ಡ್ ಅಧ್ಯಕ್ಷನ ಸ್ಥಾನ ನೀಡಿದರು ಎಂದರು.

ಆದರೆ ಅದನ್ನು ತಾನು ತಿರಸ್ಕರಿಸುವುದಾಗಿ ಹೇಳಿದ ಗೌಡರು ತನ್ನನ್ನು ಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕಾದರೆ ಶ್ರೇಯಸ್ ಪಟೇಲ್ ರನ್ನು ಪ್ರಚಂಡ ಬಹಮತದಿಂದ ಗೆಲ್ಲಿಸಬೇಕು, ಗೆಲ್ಲಿಸಿದರೆ ತಾನು ಖಂಡಿತ ಮಂತ್ರಿ ಆಗುವೆ ಮತ್ತು ಮುಂದಿನ ನಾಲ್ಕು ವರ್ಷಗಳ ಕಾಲ ಜಿಲ್ಲಾ ಉಸ್ತುವಾರಿ ಸಚಿವನಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹಾಸನದಲ್ಲಿ ಸೋದರಳಿಯ ಶ್ರೇಯಸ್ ಪಟೇಲ್ ವಿರುದ್ಧ ಬಂಡಾಯವೆದ್ದ ರಾಜೇಶ್ವರಿ; ಕಾಂಗ್ರೆಸ್​ಗೆ ತಲೆಬಿಸಿ