Karnataka Assembly Election: ಸಿದ್ದರಾಮಯ್ಯ ಜೀ ಕೋ ಗುಸ್ಸಾ ಕ್ಯೋಂ ಆತಾ ಹೈ? ಮತ್ತೊಮ್ಮೆ ಸಾರ್ವಜನಿಕವಾಗಿ ರೇಗಿದ ವಿರೋಧ ಪಕ್ಷದ ನಾಯಕ!
ಮಡಿವಾಳ ಸಮಾಜದ ಮುಖಂಡರೊಬ್ಬರಿಗೆ ಅವರು ಏಯ್ ಹೋಗಾಚೆ ಅಂತ ಐದಾರು ಬಾರಿ ಗದರುವುದನ್ನು ವಿಡಿಯೋದಲ್ಲಿ ನೋಡಬಹುದು.
ಮೈಸೂರು: ಸಿದ್ದರಾಮಯ್ಯನವರಿಗೆ (Siddaramaiah) ಇತ್ತೀಚಿನ ದಿಮಗಳಲ್ಲಿ ಕೋಪ ಸ್ವಲ್ಪ ಜಾಸ್ತಿಯೇ ಬರುತ್ತಿದೆ ಮಾರಾಯ್ರೇ. ಇಂದು ಚಾಮುಂಡೇಶ್ವರಿಗೆ (Chamundeshwari) ಚುನಾವಣಾ ಪ್ರಚಾರಕ್ಕೆ ಬಂದಾಗ ಸಿದ್ದರಾಮಯ್ಯ ಮಡಿವಾಳ ಸಮಾಜದ ಪ್ರತಿನಿಧಿಗಳ ಮೇಲೆ ರೇಗಿದರು. ಸಿದ್ದರಾಮಯ್ಯ ವೇದಿಕೆ ಕಡೆ ನಡೆದು ಹೋಗುವಾಗ ಮಡಿವಾಳ ಸಮಾಜದ (Madiala community) ಮುಖಂಡರು ಅವರನ್ನು ಸುತ್ತುವರಿದು ತಮ್ಮ ಸಮಾಜಕ್ಕೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಾರೆ. ವರುಣಾದಲ್ಲಿ ತಮ್ಮ ವಿರುದ್ಧ ವಿ ಸೋಮಣ್ಣ ಸ್ಪರ್ಧಿಸುತ್ತಿರುವುದರಿಂದ ಕೊಂಚ ವಿಚಲಿತರಾಗಿರುವಂತೆ ತೋರುವ ಸಿದ್ದರಾಮಯ್ಯಗೆ ಬಹಳ ಬೇಗ ಕೋಪಕ್ಕೊಳಗಾಗುತ್ತಿದ್ದಾರೆ. ಮಡಿವಾಳ ಸಮಾಜದ ಮುಖಂಡರೊಬ್ಬರಿಗೆ ಅವರು ಏಯ್ ಹೋಗಾಚೆ ಅಂತ ಐದಾರು ಬಾರಿ ಗದರುವುದನ್ನು ವಿಡಿಯೋದಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos